ನವದೆಹಲಿ: ಆಮ್ ಆದ್ಮಿ ಪಕ್ಷದ 'ಟಾಕ್ ಟು ಎಕೆ' ಸಾಮಾಜಿಕ ಜಾಲತಾಣಗಳ ಪ್ರಚಾರಾಂದೋಲನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆಗೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು, ಪ್ರಕರಣ ಸಂಬಂಧ ಡಿಸಿಎಂ ಹೇಳಿಕೆ ಪಡೆದುಕೊಂಡಿದ್ದಾರೆ.
ದೆಹಲಿಯ ಜಾಗೃತ ದಳ ನೀಡಿದ ದೂರಿನ ಆಧಾರದ ಮೇಲೆ ಕಳೆದ ಜನವರಿಯಲ್ಲಿ ಎಫ್ ಐಆರ್ ದಾಖಲಿಸಿಕೊಂಡಿದ್ದ ಸಿಬಿಐ, ದೆಹಲಿ ಡಿಸಿಎಂ ವಿರುದ್ಧ ಪ್ರಾಥಮಿಕ ತನಿಖೆಗೆ ಆದೇಶ ನೀಡಿತ್ತು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಿಬಿಐ, ಮನೀಶ್ ಸಿಸೋಡಿಯಾ ಅವರ ಮನೆ ಮೇಲೆ ದಾಳಿ ನಡೆಸಿಲ್ಲ, ಯಾವುದೇ ಹುಡುಕಾಟಗಳನ್ನೂ ನಡೆಸಿಲ್ಲ. ಕೆಲವು ವಿಚಾರಗಳ ಬಗ್ಗೆ ಸ್ಪಷ್ಟನೆ ಪಡೆಯಲು ಸಿಬಿಐ ಅಧಿಕಾರಿಗಳ ತಂಡ ಅವರ ಮನೆಗೆ ಭೇಟಿ ನೀಡಿತ್ತು, ಎಂದು ಹೇಳಿದೆ.
ದೆಹಲಿ ಸರ್ಕಾರದ ಜನಪ್ರಿಯ 'ಟಾಕ್ ಟು ಎಕೆ' (ಟಾಕ್ ಟು ಅರವಿಂದ್ ಕೇಜ್ರಿವಾಲ್) ಪ್ರಚಾರಾಂದೋಲನಕ್ಕೆ ಸಲಹೆಗಾರರನ್ನು ಪಡೆಯಲಾಗಿತ್ತು. ಇದಕ್ಕಾಗಿ 1.5 ಕೋಟಿ ರುಪಾಯಿಗಳನ್ನು ಪಾವತಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರದ ಜಾಗೃತ ದಳ ಸಿಬಿಐಗೆ ದೂರು ಸಲ್ಲಿಸಿತ್ತು.
ಮುಖ್ಯ ಕಾರ್ಯದರ್ಶಿ ಸಲಹೆಯನ್ನು ಕಡೆಗಣಿಸಿ ಸರಕಾರ ಸಲಹೆಗಾರರನ್ನು ನೇಮಮಿಸಿಕೊಂಡಿತ್ತು. ಮತ್ತು ಸಲಹೆಗಾರರು ಆ ಹಣವನ್ನು ಖರ್ಚು ಮಾಡಿದ್ದರು ಎಂದು ದೂರಿನಲ್ಲಿ ಜಾಗೃತ ದಳ ಉಲ್ಲೇಖಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics