ಇಂದಿನಿಂದ ಪ್ರತಿದಿನ ತೈಲ ದರ ಪರಿಷ್ಕರಣೆ! 
ದೇಶ

ಇಂದಿನಿಂದ ಪ್ರತಿದಿನ ತೈಲ ದರ ಪರಿಷ್ಕರಣೆ!

15 ದಿನಗಳಿಗೊಮ್ಮೆ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡುವ ಪದ್ಧತಿ ಜೂ.16 ರಿಂದ ಬದಲಾಗಲಿದ್ದು, ಇನ್ನು ಮುಂದೆ ಪ್ರತಿನಿತ್ಯವೂ ದರ ಪರಿಷ್ಕರಣೆಯಾಗಲಿದೆ.

ನವದೆಹಲಿ: 15 ದಿನಗಳಿಗೊಮ್ಮೆ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡುವ ಪದ್ಧತಿ ಜೂ.16 ರಿಂದ ಬದಲಾಗಲಿದ್ದು, ಇನ್ನು ಮುಂದೆ ಪ್ರತಿನಿತ್ಯವೂ ದರ ಪರಿಷ್ಕರಣೆಯಾಗಲಿದೆ. 
ಜೂ.15 ರಂದು ಹಳೆಯ ಪದ್ಧತಿಯಂತೆ ಕೊನೆಯ ದರ ಪರಿಷ್ಕರಣೆ ನಡೆದಿದ್ದು, ಪೆಟ್ರೋ ದರವನ್ನು 1.12 ರೂಪಾಯಿ ಹಾಗೂ ಡೀಸೆಲ್ ದರವನ್ನು 1.24 ರೂಪಾಯಿ ಕಡಿಮೆ ಮಾಡಲಾಗಿದ್ದು, ಪರಿಷ್ಕೃತ ದರ ಜಾರಿಯಾಗಿದೆ. ಈ ತಿಂಗಳ ಆರಂಭದಲ್ಲಿ ತೈಲ ಮಾರುಕಟ್ಟೆ ಸಂಸ್ಥೆಗಳು ತೈಲ ದರವನ್ನು ಪ್ರತಿನಿತ್ಯ ಪರಿಷ್ಕರಿಸಲು ನಿರ್ಧರಿಸಿದ್ದವು. ಈಗಿನ ಮಾರುಕಟ್ಟೆ ಸ್ಥಿತಿಗತಿಗಳಿಗೆ ಅನುಗುಣವಾಗಿ ದರವನ್ನು ನಿಗದಿಪಡಿಸುವುದು ಐಒಸಿಯ ಉದ್ದೇಶವಾಗಿದೆ. 
ಪ್ರತಿನಿತ್ಯ ತೈಲ ದರಪರಿಷ್ಕರಣೆ ಮಾಡುವುದರಿಂದ ತೈಲ ಮಾರಾಟ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ತೈಲ ಮಾರುಕಟ್ಟೆ ಸಂಸ್ಥೆಗಳ ಉದ್ದೇಶವಾಗಿದೆ. ಪ್ರತಿನಿತ್ಯ ಪರಿಷ್ಕರಣೆಯಾಗಿರುವ ತೈಲ ದರವನ್ನು ಗ್ರಾಹಕರಿಗೆ ತಲುಪಿಸಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿದ್ದು, ಎಸ್ಎಂಎಸ್ ಮೂಲಕ ಗ್ರಾಹಕರಿಗೆ ಪೆಟ್ರೋಲ್ ದರದ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಪರಿಚಯಿಸಲಿದೆ. 
ನಿತ್ಯ ದರ ಪರಿಷ್ಕರಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾರಿಯಲ್ಲಿದೆ. ಮುಂದುವರೆದ ರಾಷ್ಟ್ರಗಳಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು, ಅಲ್ಲಿನ ಬಂಕ್ ಗಳು ಸ್ವಯಂ ಚಾಲಿತ ವ್ಯವಸ್ಥೆ ಹೊಂದಿವೆ ಎಂದು ಐಓಸಿ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಂಗಾಳ Bypoll: ಕ್ಷಣಕ್ಕೊಂದು ತಿರುವು; ನಾಮಪತ್ರ ಹಿಂತೆಗೆತ ಘೋಷಿಸಿದ್ದ ರೆಜಿನಗರ್ ಟಿಎಂಸಿ ಅಭ್ಯರ್ಥಿ ಆಲಂ ಚೌಧರಿ ಯು-ಟರ್ನ್!

'ಅಂಥವನು ನಾಯಕನಲ್ಲ' ವಿಜಯ್ ಸೇತುಪತಿ ವಿವಾದಾತ್ಮಕ ಹೇಳಿಕೆ ನಡುವೆ ತಮಿಳುನಾಡು ಸಿಎಂ ಹಾಡಿ ಹೊಗಳಿದ ನಿರ್ದೇಶಕ ಅಟ್ಲೀ!

ಕಸ್ತೂರಿರಂಗನ್ ವರದಿಯ ಭೌತಿಕ ಸಮೀಕ್ಷೆ ಬಗ್ಗೆ ಜನರ ಅಹವಾಲು ಆಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ: ಸಿಎಂ; Video

'ಒಳ ಉಡುಪಿನಲ್ಲಿ ಆ ದೃಶ್ಯ ಮಾಡಿ ಅಂದ್ರು': ಬಾಲಿವುಡ್ ನಿರ್ದೇಶಕರ ಕರಾಳ ಮುಖ ಬಿಚ್ಚಿಟ್ಟ ನಟಿ ರಾಧಿಕಾ ಆಪ್ಟೆ!

ಕರಾವಳಿಗರ ಕೈಗೆ ರಕ್ತ ಸವರುತ್ತಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕೆಲಸಗಳು ಮೂಗಿಗೆ ತುಪ್ಪ ಸವರಿದಂತೆ ಕಾಣುತ್ತಿದೆ - ಪ್ರಿಯಾಂಕ್ ಖರ್ಗೆ