ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅಸಮರ್ಥ ನೌಕರರನ್ನು ಗುರುತಿಸಿ ಕೆಲಸದಿಂದ ತೆಗೆದುಹಾಕಿ: ಇಲಾಖೆ ಮುಖ್ಯಸ್ಥರಿಗೆ ರಾಜಸ್ತಾನ ಸರ್ಕಾರ ಆದೇಶ

ನಾಗರಿಕ ಸೇವಾ ಇಲಾಖೆಗಳಲ್ಲಿ 15 ವರ್ಷಗಳನ್ನು ಪೂರೈಸಿದ ಅಥವಾ 50 ವರ್ಷಗಳನ್ನು ಕಳೆದ...

ಸಾಂದರ್ಭಿಕ ಚಿತ್ರ
Sumana Upadhyaya
Updated On : 17 Jun 2017, 2:56 am
ಜೈಪುರ: ನಾಗರಿಕ ಸೇವಾ ಇಲಾಖೆಗಳಲ್ಲಿ 15 ವರ್ಷಗಳನ್ನು ಪೂರೈಸಿದ ಅಥವಾ 50 ವರ್ಷಗಳನ್ನು ಕಳೆದ ಸರ್ಕಾರಿ ನೌಕರರ ಕೆಲಸ ಅತೃಪ್ತಿಕರವಾಗಿದ್ದರೆ ಅವರನ್ನು ಗುರುತಿಸಿ ಕೆಲಸದಿಂದ ತೆಗೆದುಹಾಕುವಂತೆ ರಾಜಸ್ತಾನ ಸರ್ಕಾರದ ಮುಖ್ಯ ಕಾರ್ಯದರ್ಶಿ ಒ.ಪಿ.ಮೀನಾ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಆದೇಶ ನೀಡಿದ್ದಾರೆ.
ಇಲಾಖೆಗಳು ದುರ್ಬಲ ಸಿಬ್ಬಂದಿಯನ್ನು ಗುರುತಿಸಿ ಅವರನ್ನು ನೌಕರಿಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಮುಗಿಸುವಂತೆ ಅವರು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ತಿಳಿಸಿದ್ದಾರೆ.
ರಾಜಸ್ತಾನ ನಾಗರಿಕ ಸೇವೆ(ಪಿಂಚಣಿ) ನಿಯಮ 1996ರ ನಿಯಮ 53(1)ರ ಪ್ರಕಾರ, 15 ವರ್ಷಗಳ ಸೇವೆ ಪೂರೈಸಿದ ಅಥವಾ 50 ವರ್ಷ ದಾಟಿದ ನೌಕರರು ಅಥವಾ ಅಧಿಕಾರಿಗಳು  ಶಂಕಾಸ್ಪದ ಸಮಗ್ರತೆ ಮತ್ತು ಅತೃಪ್ತಿಕರ ಕೆಲಸ ದಾಖಲೆ ಹೊಂದಿರುವವರು ಅಥವಾ ಕೆಲವು ಅಸಮಾರ್ಥ್ಯದಿಂದ ಕೆಲಸ ಮಾಡಲು ಸಾಧ್ಯವಾಗದವರನ್ನು ಕೆಲಸದಿಂದ ತೆಗೆದುಹಾಕುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Advertisement

Advertisement

ಕಳಪೆ ಗುಣಮಟ್ಟದ ನೌಕರರಿಗೆ ನೊಟೀಸ್ ನೀಡಿ ಮೂರು ತಿಂಗಳೊಳಗೆ ಅಥವಾ ಮೂರು ತಿಂಗಳ ವೇತನ ಮತ್ತು ಭತ್ಯೆ ನೀಡಿ ತಕ್ಷಣವೇ ಸೇವೆಯಿಂದ ತೆಗೆದುಹಾಕುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement