ನವದೆಹಲಿ: ಕಾಶ್ಮೀರದಲ್ಲಿ ಶುಕ್ರವಾರ ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಠಾಣಾಧಿಕಾರಿ ಸೇರಿದಂತೆ 6 ಪೊಲೀಸರನ್ನು ಹತ್ಯೆ ಪ್ರಕರಣವನ್ನು ಶನಿವಾರ ರಕ್ಷಣಾ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ತೀವ್ರವಾಗಿ ಖಂಡಿಸಿದ್ದು, ಇದೊಂದು ಹೇಡಿಗಳ ಕೃತ್ಯ ಎಂದಿದ್ದಾರೆ.
ನಿನ್ನೆ ಪಾಕಿಸ್ತಾನ ಮೂಲದ ಶಂಕಿತ ಲಷ್ಕರ್ ಇ ತೊಯಿಬಾ ಉಗ್ರ ಸಂಘಟನೆ ಸುಮಾರು 10 ಶಸ್ತ್ರ ಸಜ್ಜಿತ ಉಗ್ರರ ತಂಡ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅಚಬಾಲ್ ನಲ್ಲಿ ಪೊಲೀಸ್ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಓರ್ವ ಠಾಣಾಧಿಕಾರಿ ಸೇರಿದಂತೆ 6 ಪೊಲೀಸರು ಹುತಾತ್ಮರಾಗಿದ್ದಾರೆ.
ಪುಲ್ವಂ ನಿವಾಸಿ ಸಬ್ ಇನ್ಸ್ ಪೆಕ್ಟರ್ ಫೆರೋಜ್ ಅಹ್ಮದ್ ದಾರ್, ಚಾಲಕ ಹಾಗೂ ಇತರೆ ನಾಲ್ವರು ಪೊಲೀಸ್ ಪೇದೆಗಳು ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.
ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಅರುಣ್ ಜೇಟ್ಲಿ ಅವರು, ಇದೊಂದು ಹೇಡಿಗಳ ಕೃತ್ಯ ಎಂದಿದ್ದಾರೆ.