ದೇಶ

ಕರಾಚಿ ಪ್ರೆಸ್'ಕ್ಲಬ್ ಮುಂದೆ ಪಾಕ್ ಸೇನೆ ವಿರುದ್ಧ ಪ್ರತಿಭಟನೆ

Manjula VN
ಕರಾಚಿ: ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಕ್ಕೆ ಪಾಕಿಸ್ತಾನ ಸೇನೆಯ ಕಾರಣ ಎಂದು ಅಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಕರಾಚಿಯಲ್ಲಿರುವ ಪ್ರೆಸ್ ಕ್ಲಬ್ ಮುಂದೆ ಪಾಕಿಸ್ತಾನ ಸೇನೆ ವಿರುದ್ಧ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. 
ಈ ಕುರಿತ ವಿಡಿಯೋವೊಂದನ್ನು ಜೇ ಸಿಂಧ್ ಮುತ್ತಾಹಿದಾ ಮಹಾಜ್ (ಜೆಎಸ್ಎಂಎಂ) ಎಂಬ ಸಂಘಟನೆಯ ಕಾರ್ಯಕರ್ತ ಜಾಹಿದ್ ಸಿಂಧಿ ಎಂಬುವವರು ಸಾಮಾಜಿಕ ಜಾಲತಾಣದ ಟ್ವಿಟರ್ ನಲ್ಲಿ ಹಾಕಿದ್ದು, ಇದೀಗ ಈ ವಿಡಿಯೋವಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿವೆ. 
ವಿಡಿಯೋದಲ್ಲಿರುವ ಪ್ರಕಾರ. ಉಗ್ರರು ತಲೆಯೆತ್ತರು ಸಮವಸ್ತ್ರಧರಿಸುವ ವ್ಯಕ್ತಿಗಳೇ ಕಾರಣ...ಗಡಿಯಲ್ಲಿ ಉದ್ವಿಗ್ನ ವಾತಾವರಣಕ್ಕೆ ಪಾಕಿಸ್ತಾನ ಸೇನೆಯೇ ಜವಾಬ್ದಾರಿ ಎಂದು ಘೋಷಣೆ ಕೂಗುತ್ತಿರುವುದು ಕಂಡು ಬಂದಿದೆ. 
ಪಾಕಿಸ್ತಾನದಿಂದ ಸಿಂಧ್ ಪ್ರಾಂತ್ಯವನ್ನು ಸ್ವತಂತ್ರಗೊಳಿಸಿ ಎಂದೂ ಕೂಡ ಪ್ರತಿಭಟನಾಕಾರರು ಇದೇ ವೇಳೆ ಆಗ್ರಹಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. 
SCROLL FOR NEXT