ಸಹಪೀಡಿಯಾ-ಯುನೆಸ್ಕೊ ಫೆಲೋಷಿಪ್(ಕೃಪೆ-ವಿಕಿಮೀಡಿಯಾ ಕಾಮನ್ಸ್)
ನವದೆಹಲಿ: ಯುವ ಜನಾಂಗ ತಮ್ಮ ಜ್ಞಾನವನ್ನು ಹೆಚ್ಚಿಸಲು ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಸಹಪೀಡಿಯಾದ ಸಾಕ್ಷ್ಯ ಸಂಕಲನಗಳನ್ನು ಉತ್ತೇಜಿಸಲು ಭಾರತದ ಕಲೆಯ ಬಗ್ಗೆ ಮುಕ್ತ ಆನ್ ಲೈನ್ ಸಂಪನ್ಮೂಲವನ್ನು ಯುನೆಸ್ಕೊ ಜೊತೆ ಜಂಟಿಯಾಗಿ ನಡೆಸಲು ಫೆಲೋಷಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಸಹಪೀಡಿಯಾ-ಯುನೆಸ್ಕೊ ಫೆಲೋಷಿಪ್ ಎಂದು ಇದಕ್ಕೆ ಹೆಸರಿಡಲಾಗಿದ್ದು, ಇದು ಡಾಕ್ಟರೇಟ್ ವಿದ್ವಾಂಸರು, ಡಾಕ್ಟರೇಟ್ ಅಭ್ಯರ್ಥಿಗಳು, ಸ್ನಾತಕೋತ್ತರ ಪದವೀಧರರು ಮತ್ತು ಪದವೀಧರರಿಗೆ ಲಭ್ಯವಾಗುತ್ತದೆ.ವಿಮರ್ಶಾತ್ಮಕ ಸಂಶೋಧನೆ, ಮಲ್ಟಿಮೀಡಿಯಾ ಸ್ವರೂಪಗಳಲ್ಲಿ ತೊಡಗಿರುವ ವಿಷಯಗಳು ಸಹಾಪೆಡಿಯಾ ವೆಬ್ಸೈಟ್ನಲ್ಲಿ ಆಯೋಜಿಸಲ್ಪಡುತ್ತವೆ.
ಫೆಲೋಶಿಪ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಒಂದು ಸಹಪೀಡಿಯಾ ಪ್ರಾಜೆಕ್ಟ್ ಫೆಲೋಶಿಪ್ ಮತ್ತು ಸಹಪೀಡಿಯಾ ರಿಸರ್ಚ್ ಫೆಲೋಶಿಪ್. ಇದರಡಿ ಅರ್ಜಿದಾರರಿಗೆ ಪ್ರಾಥಮಿಕ ಸಾಕ್ಷ್ಯ ಸಂಕಲನ ಮಟ್ಟದಲ್ಲಿ ಅಥವಾ ವಿಷಯ ಸಂರಕ್ಷಣಾ ಪ್ರಕ್ರಿಯೆಯಡಿ ಭಾಗವಹಿಸಲು ಅವಕಾಶ ನೀಡುತ್ತದೆ.
ಭಾರತದ ಕಲೆ, ಸಂಸ್ಕೃತಿ ಬಗ್ಗೆ ವಿಸ್ತಾರವಾದ ಜ್ಞಾನ ಒದಗಿಸುವುದು ಸಹಪೀಡಿಯಾದ ಉದ್ದೇಶವಾಗಿದೆ ಎಂದು ಸಹಪೀಡಿಯಾದ ಕಾರ್ಯಕಾರಿ ನಿರ್ದೇಶಕಿ ಸುಧಾ ಗೋಪಾಲಕೃಷ್ಣನ್ ತಿಳಿಸಿದ್ದಾರೆ.