ದೇಶ

ಪುನಶ್ಚೇತನಗೊಳ್ಳಲಿರುವ ರಾಜಧಾನಿ, ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳು

Sumana Upadhyaya
ನವದೆಹಲಿ: ದೇಶದ ಪ್ರಮುಖ ರೈಲುಗಳಾದ ರಾಜಧಾನಿ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ಪ್ರಮುಖವಾದವು. ಶ್ರೀಮಂತ ವರ್ಗದವರಿಗೆ ದುಬಾರಿ ರೈಲು ಪ್ರಯಾಣವನ್ನು ಪರಿಚಯಿಸಿದವೇ ರಾಜಧಾನಿ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ಗಳು.
ಆದರೆ ಹಲವು ವರ್ಷಗಳ ಸೇವೆಯ ನಂತರ ಈ ಎರಡೂ ರೈಲುಗಳು ಹಿಂದಿನ ಕಾಂತಿಯನ್ನು ಕಳೆದುಕೊಂಡವು. ಇದರಲ್ಲಿನ ಸೇವೆಗಳು ಕಳಪೆ ಗುಣಮಟ್ಟದ್ದಾದವು. ಸ್ವಚ್ಛತೆ ಕಡಿಮೆಯಾಯಿತು. ಇದರಲ್ಲಿ ಪೂರೈಕೆಯಾಗುತ್ತಿದ್ದ ಆಹಾರದ ಗುಣಮಟ್ಟ ಕೂಡ ಕಳಪೆ ಮಟ್ಟದ್ದಾದವು.
ಪ್ರಯಾಣಿಕರು ದೂರು ಸಲ್ಲಿಸುತ್ತಾ ಬಂದು ಹಲವು ವರ್ಷಗಳ ನಂತರ ದೇಶದ ಪ್ರಮುಖ ರೈಲುಗಳು ಪುನಶ್ಚೇತನಕ್ಕೆ ಸಿದ್ದವಾಗಿವೆ. ರೈಲ್ವೆ ಸಚಿವಾಲಯ ಆಪರೇಶನ್ ಸ್ವರ್ಣ್ ನ್ನು ಆರಂಭಿಸಲಿದ್ದು ಇದು ರಾಜಧಾನಿ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಗುಣಮಟ್ಟವನ್ನು ಹೆಚ್ಚಿಸಲು ಆಗಿದೆ.
ಮೊದಲ ಹಂತದಲ್ಲಿ ಮುಂಬೈ-ದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ಮತ್ತು ಮುಂಬೈ-ಅಹಮದಾಬಾದ್ ಶತಾಬ್ದಿ ಎಕ್ಸ್ ಪ್ರೆಸ್ ರೈಲನ್ನು ಉನ್ನತ ದರ್ಜೆಗೇರಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದಿನ ಸೆಪ್ಟೆಂಬರ್ 26ರಿಂದ ಕೆಲಸ ಆರಂಭವಾಗಲಿದೆ.  ಹಂತ ಹಂತವಾಗಿ ರೈಲುಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, ರೈಲ್ವೆ ಸಚಿವಾಲಯ ಆಪರೇಶನ್ ಸ್ವರ್ಣ್ ನ್ನು ಆರಂಭಿಸಲು ನಿರ್ಧರಿಸಿದೆ. ರೈಲಿನ ಆಗಮನ, ನಿರ್ಗಮನದಲ್ಲಿ ನಿಖರತೆ, ಶುಚಿತ್ವ ಮತ್ತು ಗುಣಮಟ್ಟದ ಆಹಾರ ಪೂರೈಕೆ, ಲಿನಿನ್, ತರಬೇತುದಾರ ಒಳಾಂಗಣಗಳು, ಶೌಚಾಲಯಗಳು, ಅಡುಗೆ, ಸಿಬ್ಬಂದಿ ನಡವಳಿಕೆ, ಭದ್ರತೆ, ಮನರಂಜನೆ, ಮನೆಗೆಲಸ ಮತ್ತು ಸಾಮಾನ್ಯ ಪ್ರತಿಕ್ರಿಯೆಗಳಿಗೆ ಗಮನ ಹರಿಸಲಿದೆ.
ಮುಂದಿನ ದಿನಗಳಲ್ಲಿ ವೈಫೈ, ಇನ್ಫೋಟೈನ್ಮೆಂಟ್ ಸ್ಕ್ರೀನ್ಗಳು, ಕಾಫಿ ವೆಂಡಿಂಗ್ ಮೆಷಿನ್ ಗಳಂತಹ ಸೇವೆಗಳನ್ನು ನೀಡುತ್ತವೆ.
ಅತ್ಯಾಧುನಿಕ ರೈಲಿನಲ್ಲಿ ಸುಧಾರಿತ ಕೋಚ್ ಒಳಾಂಗಣ,ಉತ್ತಮ ಶೃಂಗಾರ ಮತ್ತು ಹೊಸ ಆರಾಮದಾಯಕ ಸ್ಥಾನಗಳನ್ನು ಹೊಂದಿವೆ.
ರೈಲುಗಳ ಪುನಶ್ಚೇತನಕ್ಕೆ ರಾಜಧಾನಿ ಮತ್ತು ಶತಾಬ್ದಿ ರೈಲುಗಳಿಗೆ ತಲಾ 50 ಲಕ್ಷ  ರೂಪಾಯಿ ಒದಗಿಸಲಾಗುತ್ತದೆ. ಕೆಲಸಗಳನ್ನು ನಿರ್ವಹಿಸಲು ಎರಡು ಸಮಿತಿಗಳನ್ನು ರಚಿಸಲಾಗುತ್ತದೆ.
ಕಳೆದ ತಿಂಗಳು ರೈಲ್ವೆ ಸಚಿವ ಸುರೇಶ್ ಪ್ರಭು, ಮುಂಬೈ ಮತ್ತು ಗೋವಾ ಮಧ್ಯೆ ಮೊದಲ ಹೈ ಸ್ಪೀಡ್ ಪ್ರೀಮಿಯಂ ರೈಲು ತೇಜಸ್ ಎಕ್ಸ್ ಪ್ರೆಸ್ ನ್ನು ಉದ್ಘಾಟಿಸಿದ್ದರು.  
SCROLL FOR NEXT