ನವದೆಹಲಿ: ಬಾಬಾ ರಾಮ್ ದೇವ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಮೂಹಿಕ ಯೋಗ ಶಿಬಿರದ ಬಗ್ಗೆ ಕಾಂಗ್ರೆಸ್ ನ ನಾಯಕ ದಿಗ್ವಿಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವತಃ ದಿಗ್ವಿಜಯ್ ಸಿಂಗ್ ಯೋಗಾಭ್ಯಾಸ ಮಾಡುತ್ತಾರಾದರೂ ಸಾಮೂಹಿಕವಾಗಿ ಯೋಗ ಮಾಡುವ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಬಗ್ಗೆ ದಿಗ್ವಿಜಯ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದು, ಎಲ್ಲರಿಗೂ ಒಂದೇ ರೀತಿಯ ಯೋಗ ಹೊಂದಾಣಿಕೆಯಾಗುವುದಿಲ್ಲ, ಸಾಮೂಹಿಕ ಯೋಗ ಶಿಬಿರಗಳಲ್ಲಿ ಎಲ್ಲರಿಗೂ ಒಂದೇ ರೀತಿಯ ಯೋಗ ಮಾಡಿಸುವುದರಿಂದ ಒಳಿತಾಗುವುದಕ್ಕಿಂತ ಸಮಸ್ಯೆಯಾಗುವ ಸಾಧ್ಯತೆಯೇ ಹೆಚ್ಚು ಎಂದು ದಿಗ್ವಿಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ನಾನೂ ಸಹ ಕಳೆದ 40 ವರ್ಷಗಳಿಂದ ಯೋಗ ಮಾಡುತ್ತಿದ್ದೇನೆ, ನುರಿತ ಯೋಗ ಗುರುಗಳಿಂದ ಸಲಹೆ ಪಡೆದ ನಂತರವಷ್ಟೇ ನಾನು ಯೋಗಾಭ್ಯಾಸ ಮಾಡಲು ಪ್ರಾರಂಭಿಸಿದ್ದು, ಎಂದಿರುವ ದಿಗ್ವಿಜಯ್ ಸಿಂಗ್, ಪ್ರತಿಯೊಬ್ಬರ ದೇಹ ಪ್ರಕೃತಿಗೆ ಅನುಗುಣವಾಗಿ ಯೋಗವನ್ನು ಅಭ್ಯಾಸ ಮಾಡಬೇಕಾಗುತ್ತದೆ. ಎಲ್ಲರಿಗೂ ಒಂದೇ ರೀತಿಯ ಅಭ್ಯಾಸ ಮಾಡಿಸುವುದು ಸೂಕ್ತವಲ್ಲ. ಆದರೆ ಸಾಮೂಹಿಕ ಯೋಗ ಶಿಬಿರದಲ್ಲಿ ಈ ರೀತಿ ನಡೆಯುತ್ತಿದೆ. ಆದ್ದರಿಂದ ಆಯುಷ್ ಸಚಿವಾಲಯ ಏಮ್ಸ್ ನೊಂದಿಗೆ ಸೇರಿ ಯೋಗಕ್ಕೆ ಶಿಷ್ಟಾಚಾರ ನಿಯಮಗಳನ್ನು ರೂಪಿಸಬೇಕೆಂದು ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics