ಸಂಗ್ರಹ ಚಿತ್ರ 
ದೇಶ

"ದಿ ಗೇಮ್ ಚೇಂಜರ್": ಶೀಘ್ರ ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ 22 ಗಾರ್ಡಿಯನ್ ಡ್ರೋನ್ ಗಳು!

ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸಕ್ಕೂ ಮೊದಲೇ ಅಮೆರಿಕ ದೇಶ ಭಾರತಕ್ಕೆ 22 ಗಾರ್ಡಿಯನ್ ಡ್ರೋನ್ ಗಳನ್ನು ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದೆ.

ವಾಷಿಂಗ್ಟನ್‌: ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸಕ್ಕೂ ಮೊದಲೇ ಅಮೆರಿಕ ದೇಶ ಭಾರತಕ್ಕೆ 22 ಗಾರ್ಡಿಯನ್ ಡ್ರೋನ್ ಗಳನ್ನು ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದೆ.

ರಕ್ಷಣಾ ವಲಯದಲ್ಲಿ "ದಿ ಗೇಮ್ ಚೇಂಜರ್" ಎಂದೇ ಖ್ಯಾತ ಪಡೆದಿರುವ ಗಾರ್ಡಿಯನ್ ಡ್ರೋನ್ ಗಳನ್ನು ಭಾರತಕ್ಕೆ ಮಾರಾಟ ಮಾಡುವ ಕುರಿತು ಅಮೆರಿಕ ಒಪ್ಪಿಗೆ ನೀಡಿದ್ದು, ಸುಮಾರು 22 ಗಾರ್ಡಿಯನ್ ಡ್ರೋನ್ ಗಳು ಶೀಘ್ರದಲ್ಲೇ  ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ. ಇದು 13,000 ದಿಂದ 19,000 ಕೋಟಿ ರು. (2 ರಿಂದ 3 ಬಿಲಿಯನ್ ಡಾಲರ್)ಮೊತ್ತದ ಒಪ್ಪಂದವಾಗಿದ್ದು, ಈ ಒಪ್ಪಂದಕ್ಕೆ ಅಮೆರಿಕ ವಿದೇಶಾಂಗ ಇಲಾಖೆ ಬುಧವಾರ ಒಪ್ಪಿಗೆ ನೀಡಿದೆ.   ಅಂತೆಯೇ ಭಾರತ ಸರ್ಕಾರಕ್ಕೆ ಈ ನಿರ್ಧಾರವನ್ನು ಕೂಡ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಬಳಿಕ ಭಾರತದೊಂದಿಗೆ ಮಾಡಿಕೊಂಡ ಮೊದಲ ಪ್ರಮುಖ ಒಪ್ಪಂದ ಇದು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಹಿಂದಿನ ಒಬಾಮಾ ಆಡಳಿತಕ್ಕೆ  ಹೋಲಿಸಿದರೆ ಟ್ರಂಪ್‌ ಸರ್ಕಾರ ಭಾರತದೊಂದಿಗೆ ಆಶ್ವಾಸನೆಗಳಿಗಿಂತ ಹೆಚ್ಚು ಫಲಿತಾಂಶ ಕೇಂದ್ರೀಕೃತವಾಗಿರುವ ಬಗ್ಗೆ ಸುಳಿವು ನೀಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಒಬಾಮ ಆಡಳಿತದ ಸಂದರ್ಭದಲ್ಲೇ ಅಮೆರಿಕ ಕಾಂಗ್ರೆಸ್ ಭಾರತಕ್ಕೆ ಪ್ರಿಡೇಟರ್ ಡ್ರೋನ್ ಗಳನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!