ನೌಕಾಪಡೆ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದು 
ದೇಶ

75 ವರ್ಷಗಳಿಂದ ರೈತರು ಬೇಸಾಯ ಮಾಡುತ್ತಿದ್ದರೂ ದಾಖಲೆಯಲ್ಲಿ ಭೂಮಿ ರಕ್ಷಣಾ ಇಲಾಖೆಗೆ ಸೇರಿದ್ದು!

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ತಾಲ್ಲೂಕಿನ ನೆವಲಿ ಏರ್ ಸ್ಟ್ರಿಪ್ ಹತ್ತಿರ ಇರುವ 1,600 ಎಕರೆಗೂ...

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ತಾಲ್ಲೂಕಿನ ನೆವಲಿ ಏರ್ ಸ್ಟ್ರಿಪ್ ಹತ್ತಿರ ಇರುವ 1,600 ಎಕರೆಗೂ ಅಧಿಕ ವಿವಾದಿತ ಭೂಮಿಯಲ್ಲಿ ಕಳೆದ 75 ವರ್ಷಗಳಿಂದ ರೈತರು ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಆದರೆ ರಕ್ಷಣಾ ಸಚಿವಾಲಯದ ದಾಖಲೆಗಳಲ್ಲಿ ಎಲ್ಲಾ ಭೂಮಿಗಳು ಇಲಾಖೆಯ ಹೆಸರಲ್ಲಿದೆ.
ನಮ್ಮ ಪೂರ್ವಜರ ಕಾಲದಿಂದಲೇ ಈ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿದ್ದೇವೆ. 2ನೇ ವಿಶ್ವಯುದ್ಧದ ಸಮಯದಲ್ಲಿ ಈ ಭೂಮಿಯನ್ನು ಬ್ರಿಟಿಷ್ ಸರ್ಕಾರ ವಶಪಡಿಸಿಕೊಂಡಿತ್ತು ಎಂದು ನಾವು ಕೂಡ ಕೇಳಿದ್ದೆವು. ಆದರೆ ವಿಶ್ವಯುದ್ಧದ ನಂತರ ಭೂಮಿಯನ್ನು ಮತ್ತೆ ನಮಗೆ ಹಿಂತಿರುಗಿಸಲಾಯಿತು ಎಂದು ನಮ್ಮ ಪೂರ್ವಜರು ಹೇಳುತ್ತಿದ್ದರು. ಅಲ್ಲಿಂದ ನಾವು ಈ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ ಎಂದು ರೈತರ ಸಂಘಟನೆಯಾದ ಶ್ರೀ ಮಲಂಗದ್ದ್ ಪರಿಸರ್ ಜಮೀನ್ ಬಚಾವ್ ಆಂದೋಲನ ಸಮಿತಿಯ ಅಧ್ಯಕ್ಷ ಮಾಥುರ್ ಮಟ್ರೆ ತಿಳಿಸಿದ್ದಾರೆ.
ರಕ್ಷಣಾ ಇಲಾಖೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಮಾಂಡರ್ ರಾಹುಲ್ ಸಿನ್ಹಾ ನಿನ್ನೆ ಮುಂಬೈಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ಭೂಮಿಯು ರಕ್ಷಣಾ ಸಚಿವಾಲಯ/ಭಾರತೀಯ ನೌಕಾಪಡೆ ಮತ್ತು ರಾಜ್ಯ ಸರ್ಕಾರಕ್ಕೆ ಸೇರಿದ್ದಾಗಿದೆ. 7/12 ಉದ್ಧರಣಗಳು ರಕ್ಷಣಾ ಇಲಾಖೆಗೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT