ದೇಶ

ಜಾಧವ್ ತಪ್ಪೊಪ್ಪಿಗೆ ವಿಡಿಯೋ ಬಿಡುಗಡೆ: ಪಾಕ್ ವಿರುದ್ಧ ಭಾರತ ಗುಡುಗು

Manjula VN
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಬೇಹುಗಾರಿಕೆಯ ಆರೋಪದಲ್ಲಿ ಬಂಧಿತನಾಗಿ ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ತಪ್ಪೊಪ್ಪಿಕೊಂಡಿದ್ದಾರೆಂದು ಹೇಳಿ ಪಾಕಿಸ್ತಾನ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ನೆರೆ ರಾಷ್ಟ್ರದ ಈ ಆರೋಪಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಬೇಹುಗಾರಿಕೆ ನಡೆಸುತ್ತಿರುವ ಕುರಿತಂತೆ ಜಾಧವ್ ತಪ್ಪೊಪ್ಪಿಕೊಂಡಿದ್ದು, ಮರಣದಂಡನೆಯಿಂದ ಕ್ಷಮಾದಾನ ನೀಡುವಂತೆ ಮನವಿ ಮಾಡಿದ್ದಾರೆಂಬ ವಿಡಿಯೋವನ್ನು ನಿನ್ನೆಯಷ್ಟೇ ಪಾಕಿಸ್ತಾನ ಬಿಡಗಡೆ ಮಾಡಿತ್ತು. 
ಇದಕ್ಕೆ ಭಾರತ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಕೃತಕವಾಗಿ ತಯಾರಿಸಿದ ಸತ್ಯಗಳು ಎಂದಿಗೂ ವಾಸ್ತವವಾಗಲು ಸಾಧ್ಯವಿಲ್ಲ ಎಂದು ಹೇಳಿದೆ. 
ಜಾಧವ್ ಕುರಿತ ಅಂತರಾಷ್ಟ್ರೀಯ ನ್ಯಾಯಾಲಯದ ವಿಚಾರಣೆ ಮೇಲೆ ಪರಿಣಾಮ ಬೀರಲು ಪಾಕಿಸ್ತಾನ ಹುಸಿ ಪ್ರಚಾರದಲ್ಲಿ ತೊಡಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. 
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಗೆ ಸಂಬಂಧಿಸಿದ ಆರ್ಥಿಕ ಚಟುವಟಿಕೆಗಳನ್ನು ಹಾಳುಗೆಡವು ಉದ್ದೇಶದಿಂದ ಪಾಕಿಸ್ತಾನದಲ್ಲಿ ಭಾರತದ ಗುಪ್ತಚರ ಸಂಸ್ಥೆ ರಾ ವಿವಿಧ ಭಯೋತ್ಪಾದನಾ ಚಟುವಟಿಕೆ ಪ್ರಾಯೋಜಿಸಿದೆ ಮತ್ತು ಬಲೂಚಿಸ್ತಾನ ಹಾಗೂ ಕರಾಚಿಯಲ್ಲಿ ಬಂಡಾಯವನ್ನು ತೀವ್ರಗೊಳಿಸಿದೆ ಎಂಬುದನ್ನು ಜಾಧವ್ ಒಪ್ಪಿಕೊಂಡಿರುವುದು ವಿಡಿಯೋದಲ್ಲಿದೆ ಎಂದು ಮೂಲಗಳು ತಿಳಿಸಿವೆ. 
SCROLL FOR NEXT