ಸಂಗ್ರಹ ಚಿತ್ರ 
ದೇಶ

ಮದುವೆ ಹಾಗೂ ಸಂಭೋಗಕ್ಕೆ ಒಪ್ಪದ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಯುವತಿ

ಮದುವೆ ಹಾಗೂ ಸಂಭೋಗಕ್ಕೆ ಒಪ್ಪದ 35 ವರ್ಷದ ಪ್ರಿಯಕರನ ಮರ್ಮಾಂಗವನ್ನು ಯುವತಿಯೊಬ್ಬಳು ಕತ್ತರಿಸಿ ಹಾಕಿರುವ ಘಟನೆ ದೆಹಲಿಯ...

ನವದೆಹಲಿ: ಮದುವೆ ಹಾಗೂ ಸಂಭೋಗಕ್ಕೆ ಒಪ್ಪದ 35 ವರ್ಷದ ಪ್ರಿಯಕರನ ಮರ್ಮಾಂಗವನ್ನು ಯುವತಿಯೊಬ್ಬಳು ಕತ್ತರಿಸಿ ಹಾಕಿರುವ ಘಟನೆ ದೆಹಲಿಯ ಹೊರವಲಯದ ಮಂಗಳಪುರಿಯಲ್ಲಿ ನಡೆದಿದೆ. 
22 ವರ್ಷದ ಯುವತಿ ತನ್ನನ್ನು ಮದುವೆಯಾಗುವಂತೆ ಕೇಳಿದ್ದಾಳೆ ಇದಕ್ಕೆ ಪ್ರಿಯಕರ ಒಪ್ಪದಿದ್ದಾಗ ಆತನನ್ನು ಬಾತ್ ರೂಂಮಿಗೆ ಕರೆದುಕೊಂಡು ಹೋಗಿ ಸೆಕ್ಸ್ ಮಾಡುವಂತೆ ಬಲವಂತ ಮಾಡಿದ್ದಾಳೆ. ಇದನ್ನು ಪ್ರಿಯಕರ ನಿರಾಕರಿಸಿದ್ದರಿಂದ ಕೋಪಗೊಂಡ ಯುವತಿ ಚಾಕುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದಾಳೆ. 
ಘಟನೆ ಬಳಿಕ ಯುವತಿ ಪೋಷಕರೊಂದಿಗೆ ತಲೆ ಮರೆಸಿಕೊಂಡಿದ್ದು ಮಂಗಳಪುರಿ ಪೊಲೀಸರು ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ದಾಖಲಿಸಿದ್ದಾರೆ. 
ಮರ್ಮಾಂಗ ಛೇದನಕ್ಕೆ ಗುರಿಯಾದ ವ್ಯಕ್ತಿಯನ್ನು ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಶಿಶ್ನವನ್ನು ಜೋಡಿಸಿದ್ದಾರೆ. ಸದ್ಯ ವ್ಯಕ್ತಿ ಪ್ರಾಣಾಪಾದಯದಿಂದ ಪಾರಾಗಿದ್ದು ಜೋಡಿಸಲ್ಪಟ್ಟಿರುವ ಆತನ ಶಿಶ್ನ ಮತ್ತೆ ಹಿಂದಿನಂತಾಗದಿರುವ ಆತಂಕವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ