ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ
ವಾಷಿಂಗ್ ಟನ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದು, ಅಮೆರಿಕಾದ ನೂತನ ಸರ್ಕಾರ ಭಾರತವನ್ನು ನಿರ್ಲಕ್ಷಿಸುತ್ತಿದೆಯೇ ಎಂಬ ಪ್ರಶ್ನೆಗೆ ಅಮೆರಿಕಾ ಅಧಿಕಾರಿಗಳು ಉತ್ತರಿಸಿದ್ದು, " ಭಾರತ ವಿಶ್ವದಲ್ಲಿ ಸಕಾರಾತ್ಮಕ ಶಕ್ತಿ ಎಂಬುದನ್ನು ಡೊನಾಲ್ಡ್ ಟ್ರಂಪ್ ಅರಿತಿದ್ದಾರೆ ಎಂದು ಅಮೆರಿಕಾದ ಉನ್ನತಾಧಿಕಾರಿಗಳು ಹೇಳಿದ್ದಾರೆ.
ವಿಶ್ವದಲ್ಲಿ ಸಕಾರಾತ್ಮಕ ಶಕ್ತಿಯಾಗಿರುವ ಭಾರತದೊಂದಿಗೆ ಬಾಂಧವ್ಯ ಮುಖ್ಯವಾಗಿದ್ದು, ಭಾರತವನ್ನು ನಿರ್ಲಕ್ಷಿಸಿದ್ದೇವೆ ಅಥವಾ ಅದರತ್ತ ಗಮನ ಕೇಂದ್ರೀಕರಿಸುತ್ತಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಭಾರತದ ಬಗ್ಗೆ ಅಮೆರಿಕಾಗೆ ಅಪಾರ ಗೌರವವಿದೆ, ವಿಶ್ವದಲ್ಲಿ ಭಾರತ 'ಸಕಾರಾತ್ಮಕ ಶಕ್ತಿ' ಎಂಬುದನ್ನು ಟ್ರಂಪ್ ಅರಿತಿದ್ದಾರೆ, ಇದು ಪ್ರಧಾನಿ ಮೋದಿ ಹಾಗೂ ಟ್ರಂಪ್ ಅವರ ಭೇಟಿ ವೇಳೆ ವ್ಯಕ್ತವಾಗುತ್ತದೆ ಎಂದು ಅಮೆರಿಕ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜೂ.25-26 ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೆ ಭೇಟಿ ನೀಡಲಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧಿಕಾರಿಗಳ ಹೇಳಿಕೆ ಮಹತ್ವ ಪಡೆದುಕೊಂಡಿದೆ.