ನವದೆಹಲಿ: ಭಾರತೀಯ ಮೂಲ ವ್ಯಕ್ತಿ- ಪರ್ಸನ್ ಆಫ್ ಇಂಡಿಯನ್ ಒರಿಜನ್ ಕಾರ್ಡುಗಳನ್ನು ವಿದೇಶೀ ಭಾರತೀಯ ಪ್ರಜೆ - ಓವರ್‍ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡಿಗೆ ಬದಲಿಸಿಕೊಳ್ಳಲು ಈ ವರ್ಷಾಂತ್ಯದವರೆಗೆ ಅವಕಾಶ ವಿಸ್ತರಿಸಲಾಗಿದೆ.
ಈ ಹಿಂದೆ ಪರ್ಸನ್ ಆಫ್ ಇಂಡಿಯಾ - ಪಿಒಐ ಕಾರ್ಡ್ ನಿಂದ ಓವರ್‍ಸೀಸ್ ಸಿಟಿಜನ್ ಆಫ್ ಇಂಡಿಯಾ - ಒಸಿಐ ಕಾರ್ಡಿಗೆ ಬದಲಿಸಿಕೊಳ್ಳುವ ಅವಕಾಶ ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳುತ್ತಿತ್ತು. 2016ರ ಮಾರ್ಚ್ 31ಕ್ಕೆ ಅಂತ್ಯಗೊಂಡಿದ್ದ ಈ ಕಾರ್ಡ್ ಬದಲಾವಣೆ ಅವಧಿಯನ್ನು ನಾಲ್ಕು ಬಾರಿ ವಿಸ್ತರಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಪಿಐಒ ಮತ್ತು ಒಸಿಐ ಎರಡೂ ಕಾಡ್‍ಗಳ ಬಳಕೆ ವಿದೇಶೀ ಪ್ರಜೆಗಳಲ್ಲಿ ಗೊಂದಲ ಮೂಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕಾರ್ಡುಗಳು ವಿಲೀನಗೊಂಡು ಭಾರತೀಯ ಮೂಲದ ವಿದೇಶೀ ಪ್ರಜೆಗಳಿಗೆ ಗರಿಷ್ಠ ಸಾಧ್ಯ ಅನುಕೂಲಗಳನ್ನು ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ 2014 ರಲ್ಲಿ ಘೋಷಿಸಿದ್ದರು. ವಿದೇಶೀ ಭಾರತೀಯ ಪ್ರಜೆಗಳಿಗೆ ನೆರವಾಗಲು 2002ರಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾದ ಪಿಒಐ ಕಾರ್ಡ್ ಪ್ರವಾಸ, ಕೆಲಸ ಮತ್ತು 15 ವರ್ಷ ಭಾರತದಲ್ಲಿ ನೆಲೆಸಲು ಬಳಸಬಹುದಾಗಿತ್ತು. 2005ರಿಂದ ನೀಡಲಾಗುತ್ತಿರುವ ಒಸಿಐ ಕಾರ್ಡ್‍ಗೆ ಶಾಶ್ವತ ಮಾನ್ಯತೆ ಇದ್ದು, ಪಿಒಐ ಕಾರ್ಡ್‍ಗಿಂತ ಹೆಚ್ಚಿನ ಪ್ರಯೋಜನಗಳು ಲಭ್ಯ.