ಸಂಗ್ರಹ ಚಿತ್ರ 
ದೇಶ

ದಶಕಗಳ ಕನಸು ನನಸು: ಯೋಧರಿಗೆ ಅಂತೂ ಬಂತು ಗುಂಡು ನಿರೋಧಕ ಹೆಲ್ಮೆಟ್

ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಭಾರತೀಯ ಸೈನಿಕರ ದಶಕಗಳ ಕನಸು ಅಂತೂ ನನಸಾಗಿದ್ದು, ಸೇನಗೆ ಗುಂಡು ನಿರೋಧಕ ಶಿರಸ್ತ್ರಾಣಗಳನ್ನು ಒದಗಿಸಲಾಗಿದೆ...

ನವದೆಹಲಿ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಭಾರತೀಯ ಸೈನಿಕರ ದಶಕಗಳ ಕನಸು ಅಂತೂ ನನಸಾಗಿದ್ದು, ಸೇನಗೆ ಗುಂಡು ನಿರೋಧಕ ಶಿರಸ್ತ್ರಾಣಗಳನ್ನು ಒದಗಿಸಲಾಗಿದೆ. 
ಈವರೆಗೆ ಸೇರ್ಪಡೆಗೊಳ್ಳುವ ಯೋಧರಿಗೆ ಪಟಕಾ ಮಾದರಿಯ ಹೆಲ್ಮೆಟ್ ಗಳನ್ನು ನೀಡಲಾಗುತ್ತಿತ್ತು. ಇವು ಹಣೆ ಮತ್ತು ಹಿಂಭಾಗಕ್ಕೆ ಮಾತ್ರ ರಕ್ಷಣೆ ನೀಡುತ್ತಿದ್ದವು. ಮೇಲಾಗಿ 2.5 ಕೆಜಿ ತೂಕ ಹೊಂದಿದ್ದ ಇವುಗಳನ್ನು ಹಾಕಿಕೊಳ್ಳುವುದು ಯೋಧರಿಗೆ ಭಾರವಾಗಿ ಪರಿಣಮಿಸುತ್ತಿತ್ತು. 
ಹೀಗಾಗಿ ಕಡಿಮೆ ತೂಕದ ಹಾಗೂ ಗುಂಡು ನಿರೋಧಕ ಶಿರಸ್ತ್ರಾಣಗಳನ್ನು ನೀಡಬೇಕೆಂದು ಯೋಧರು ಹಲವು ವರ್ಷಗಳಿಂದಲೂ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. 
ಇದರಂತೆ ಯೋಧರ ದಶಕಗಳ ಕನಸು ಇದೀಗ ನಿಜವಾಗಿದ್ದು, ಕಾನ್ಪುರ ಮೂಲದ ಕಂಪನಿಯೊಂದಕ್ಕೆ ರೂ.1.6 ಲಕ್ಷ ಹೆಲ್ಮೆಟ್ ತಯಾರಿಸಲು ಈ ವರ್ಷದ ಅಂತ್ಯದಲ್ಲಿ ಗುತ್ತಿಗೆ ನೀಡಲಾಗಿತ್ತು. ಎಂಕೆಯು ಲಿಮಿಟೆಡ್ ಎಂಬ ಈ ಕಂಪನಿ ಈಗ ಹೆಲ್ಮೆಟ್ ಗಳ ಮೊದಸ ದಾಸ್ತಾನನ್ನು ಸೇನೆಗೆ ಹಸ್ತಾಂತರಿಸಿದೆ. 
ತೀರಾ ಹತ್ತಿರದಿಂದ ಹಾರಿಸುವ 9ಎಂಎಂ ಗುಂಡುಗಳನ್ನು ತಾಳಿಕೊಳ್ಳುವ ಸಾಮರ್ಥ್ಯ ಈ ಶಿರಸ್ತ್ರಾಣಗಳಿವೆ ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!