ಬಿಪಿನ್ ರಾವತ್ 
ದೇಶ

ಗಡಿ ವಿವಾದ: ಸಿಕ್ಕಿಂಗೆ ಭೇಟಿ ನೀಡಲಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಸಿಕ್ಕಿಂ ನ ಗಡಿ ಪ್ರದೇಶದಲ್ಲಿ ಚೀನಾ-ಭಾರತ ಪಡೆಗಳ ನಡುವೆ ತಳ್ಳಾಟ ನಡೆದು, ಘರ್ಷಣೆಯ ಸ್ಥಿತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ಗಡಿ ಪ್ರದೇಶಕ್ಕೆ ಇಂದು ಭಾರತೀಯ ಸೇನಾ ಮುಖ್ಯಸಿಥ ಬಿಪಿನ್ ರಾವತ್ ಭೇಟಿ ನೀಡಲಿದ್ದಾರೆ.

ನವದೆಹಲಿ: ಸಿಕ್ಕಿಂ ಗಡಿ ಪ್ರದೇಶದಲ್ಲಿ ಚೀನಾ-ಭಾರತ ಪಡೆಗಳ ನಡುವೆ ತಳ್ಳಾಟ ನಡೆದು, ಘರ್ಷಣೆಯ ಸ್ಥಿತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ಗಡಿ ಪ್ರದೇಶಕ್ಕೆ ಇಂದು ಭಾರತೀಯ ಸೇನಾ ಮುಖ್ಯಸಿಥ ಬಿಪಿನ್ ರಾವತ್ ಭೇಟಿ ನೀಡಲಿದ್ದಾರೆ. 
ಸೇನಾ ಮುಖ್ಯಸ್ಥರು ಆಗಾಗ್ಗೆ ಸಿಕ್ಕಿಂ ಭೇಟಿ ನೀಡುವುದು ಸಹಜವೆ ಆಗಿದ್ದರೂ, ಭಾರತ-ಚೀನಾ ಗಡಿ ಪ್ರದೇಶದಲ್ಲಿ ಉಂಟಾಗಿರುವ ವಾತಾವರಣದಿಂದ ಈ ಬಾರಿಯ ಎರಡು ದಿನಗಳ ಭೇಟಿ ಮಹತ್ವ ಪಡೆದುಕೊಂಡಿದೆ.

ಸಿಕ್ಕಿಂನ ಭಾರತದ ಟ್ರೈ-ಜಂಕ್ಷನ್ ನಲ್ಲಿದ್ದ ಭಾರತೀಯ ಸೇನೆಯ ಹಳೆ ಬಂಕರ್ ಗಳನ್ನು ಚೀನಾ ಮತ್ತು ಭೂತಾನ್ ಬುಲ್ಡೋಜರ್ ಬಳಸಿ ತೆರವುಗೊಳಿಸಿದ್ದು, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಈ ಭಾಗಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. 
ಜೂನ್ ಮೊದಲ ವಾರದಲ್ಲಿ ಸಿಕ್ಕಿಂ ವಲಯ ಪ್ರವೇಶಿಸಿದ ಚೀನಾ ಪಡೆಗಳು ಇಂಡೋ ಚೀನಾ ಗಡಿಭಾಗದ ದೋಕಾ ಲಾ ಸಾರ್ವತ್ರಿಕ ಪ್ರದೇಶದಲ್ಲಿದ್ದ ಎರಡು ಬಂಕರ್'ಗಳನ್ನು ನಾಶ ಮಾಡಿದೆ.

ಎರಡೂ ಸೇನೆಗಳ ಹಿರಿಯ ಅಧಿಕಾರಿಗಳ ನಡುವೆ ಜೂನ್.20ರಂದು ಧ್ವಜಸ್ತಂಭ ಮಾತುಕತೆ ನಡೆದಿದ್ದು, ಆದಾಗ್ಯು ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. 2008ರ ನವೆಂಬರ್'ನಲ್ಲೂ ಕೂಡ ಇದೇ ಪ್ರದೇಶದಲ್ಲಿ ಚೀನಾ ಪಡೆ ಬಂಕರ್'ಗಳನ್ನು ನಾಶಗೊಳಿಸಿತ್ತು.
ಕಳೆದ 2-3 ದಿನಗಳ ಹಿಂದೆ ಭಾರತ ತನ್ನ ಗಡಿ ಪ್ರದೇಶವನ್ನುಅತಿಕ್ರಮಿಸಿರುವ ಆರೋಪ ಮಾಡಿದ್ದ ಚೀನಾ, ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಯಾತ್ರಾರ್ಥಿಗಳಿಗೆ ನಾಥು ಲಾ ಪಾಸ್ ಗೆ ಪ್ರವೇಶ ನಿರ್ಬಂಧಿಸಿತ್ತು. ಅಷ್ಟೇ ಅಲ್ಲದೇ ಭಾರತಕ್ಕೆ ನಿಯಮಗಳನ್ನು ಕಲಿಸಬೇಕಿದೆ ಎಂದು ಚೀನಾದ ಪತ್ರಿಕೆ ಗ್ಲೋಬಲ್ ಟೈಮ್ಸ್ ಲೇಖನ ಪ್ರಕಟಿಸಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT