ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬೇಬಿ ಮೋಶೆ (ಸಂಗ್ರಹ ಚಿತ್ರ)
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜುಲೈ ತಿಂಗಳ ಮೊದಲ ವಾರದಲ್ಲಿ ಇಸ್ರೇಲ್ ಪ್ರವಾಸ ಕೈಗೊಳ್ಳುತ್ತಿದ್ದು, ಈ ವೇಳೆ 26/11 ಮುಂಬೈ ದಾಳಿಯ ಸಂತ್ರಸ್ತ ಬಾಲಕನನ್ನು ಭೇಟಿಯಾಗಲಿದ್ದಾರೆಂದು ಹೇಳಲಾಗುತ್ತಿದೆ.
2008ರ 26/11 ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಮೋಶೆ ಎಂಬ ಬಾಲಕ ಬದುಕುಳಿದಿದ್ದ. ನಾರಿಮನ್ ಹೌಸ್ ನಲ್ಲಿ 6 ಮಂದಿ ಮೇಲೆ ನಡೆದಿದ್ದ ಉಗ್ರರ ಗುಂಡಿನ ದಾಳಿಯಲ್ಲಿ ಬಾಲಕ ತಂದೆ ಮತ್ತು ತಾಯಿಯನ್ನು ಕಳೆದುಗೊಂಡಿದ್ದ. ಆಗ ಮೋಶೆ 2 ವರ್ಷದ ಬಾಲಕನಾಗಿದ್ದ.
ಉಗ್ರರ ದಾಳಿಯಿಂದಾಗಿ ಪೋಷಕರನ್ನು ಕಳೆದುಕೊಂಡಿದ್ದ ಮೋಶೆಗೆ ಇದೀಗ 10 ವರ್ಷ ವಯಸ್ಸಾಗಿದೆ. ಪ್ರಸ್ತುತ ಮೋಶೆ ಇಸ್ರೇಲ್ ನಲ್ಲಿ ತನ್ನ ಅಜ್ಜಿ ಹಾಗೂ ಅಜ್ಜರೊಂದಿಗಿದ್ದಾನೆ.
ಇಸ್ರೇಲ್ ಭೇಟಿ ನೀಡುತ್ತಿರುವ ಪ್ರಧಾನ ಮೋದಿಯವರು ಮೋಶೆಯನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಇದೊಂದು ಅತೀವ ಭಾವನಾತ್ಮಕ ಭೇಟಿಯಾಗಲಿದೆ ಎಂದು ಇಸ್ರೇಲ್ ನ ಭಾರತ ರಾಯಭಾರಿ ಡೇನಿಯಲ್ ಕರ್ಮೊನ್ ಅವರು ಹೇಳಿದ್ದಾರೆ.