ನವದೆಹಲಿ: ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಎಸ್ ಟಿ)ಯನ್ನು ಅತ್ಯಂತ ಸುಲಭವಾಗಿ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಭರವಸೆ ನೀಡಿದ್ದಾರೆ.
ಜಿಎಸ್ ಟಿ ಜಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮೊದಲ ಎರಡು ತಿಂಗಳು ಅತ್ಯಂತ ಕಠಿಣವಾಗಿ ನಡೆದುಕೊಳ್ಳುವುದಿಲ್ಲ. ಸ್ವಲ್ಪ ಮಟ್ಟಿಗೆ ವಿನಾಯ್ತಿ ನೀಡುತ್ತಾರೆ ಎಂದು ಹೇಳುವ ಮೂಲಕ ಅರುಣ್ ಜೇಟ್ಲಿ ಅವರು ಜನರ ಆತಂಕವನ್ನು ಕಡಿಮೆ ಮಾಡಿದ್ದಾರೆ.
ಜಿಎಸ್ ಟಿ ಜಾರಿಯನ್ನು ಎಷ್ಟು ಸಾಧ್ಯನೋ ಅಷ್ಟು ಸುಲಭಗೊಳಿಸುತ್ತೇವೆ. ಯಾವುದೆ ಒಂದು ದೊಡ್ಡ ಬದಲಾವಣೆ ತರಬೇಕಾದರೆ ಕೆಲವೊಂದ ಗೊಂದಲ ಹಾಗೂ ಆತಂಕಗಳು ಇದ್ದೇ ಇರುತ್ತವೆ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಅವುಗಳನ್ನು ಒಂದೇರಡು ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಜೇಟ್ಲಿ ತಿಳಿಸಿದ್ದಾರೆ.
ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರುತ್ತಿದ್ದು, ಈ ಬಗ್ಗೆ ಜನರಿಗೆ ಇರುವ ಗೊಂದಲಗಳನ್ನು ಪರಿಹರಿಸುವುದ್ಕಾಗಿ ಕೇಂದ್ರ ಸರ್ಕಾರ ಹಲವು ದೂರವಾಣಿಗಳು, ಕಂಪ್ಯೂಟರ್ ಗಳು ಹಾಗೂ ತಂತ್ರಜ್ಞರ ತಂಡವಿರುವ ಮಿನಿ ವಾರ್ ರೂಂ ಅನ್ನು ಸಿದ್ಧಪಡಿಸಿದೆ.