ದೇಶ

ಕೇರಳ: 350 ಯುವಕರನ್ನು ಐಎಸ್ಐಎಸ್ ಸೇರ್ಪಡೆಯಿಂದ ತಡೆದ "ಆಪರೇಷನ್ ಪಿಜನ್"

Srinivas Rao BV
ಕೊಚ್ಚಿ: ಕೇರಳದ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಬರೊಬ್ಬರಿ 350 ಯುವಕರನ್ನು ಇಸ್ಲಾಮಿಕ್ ಉಗ್ರ ಸಂಘಟನೆ(ಇಸೀಸ್) ನತ್ತ ಆಕರ್ಷಣೆಯಿಂದ ಹೊರ ತಂದಿದೆ.
ಕೇರಳದ ಉತ್ತರ ಭಾಗದಲ್ಲಿ ಇಸೀಸ್ ನತ್ತ ಆಕರ್ಷಣೆಯಾಗಿ ಸೇರ್ಪಡೆಗೊಳ್ಳುವ ಯುವಕರ ಸಂಖ್ಯೆ ಹೆಚ್ಚುತ್ತಿರುವುದು 2016 ರಲ್ಲಿ ಬೆಳಕಿಗೆ ಬಂದಿತ್ತು. ನಂತರ ಗೌಪ್ಯವಾಗಿ ಕಾರ್ಯತಂತ್ರ ರೂಪಿಸಿದ ಕೇರಳ ಪೊಲೀಸರು ಆಪರೇಷನ್ ಪಿಜನ್ ಹೆಸರಿನಲ್ಲಿ ಗೌಪ್ಯ ಕಾರ್ಯಾಚರಣೆಗೆ ಇಳಿದು, ಇಸೀಸ್ ನತ್ತ ಆಕರ್ಷಿತರಾಗಿದ್ದ ಯುವಕರ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದು, ಅಂತಹ ಯುವಕರನ್ನು ಕೌನ್ಸಿಲಿಂಗ್ ಮಾಡಿ ಬರೊಬ್ಬರಿ 350 ಯುವಕರು ಇಸೀಸ್ ಉಗ್ರ ಸಂಘಟನೆ ಸೇರುವುದನ್ನು ತಪ್ಪಿಸಿದ್ದಾರೆ. 
ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಇಸೀಸ್ ನತ್ತ ಆಕರ್ಷಣೆಯಾಗಿ ಇಸೀಸ್ ಉಗ್ರ ಸಂಘಟನೆ ಸೇರಲು ನಿರ್ಧರಿಸಿದ್ದರು ಎಂದು ಎನ್ಐಎ, ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಕಣ್ಣೂರಿನಿಂದ 118 ಯುವಕರು, ಮಲಪ್ಪುರಂ ನಿಂದ 89 ಯುವಕರು, ಕಾಸರಗೋಡಿನಿಂದ 66 ಯುವಕರು ಹಾಗೂ ಕೋಝಿಕ್ಕೋಡ್ ನಿಂದ 25 ಯುವಕರು ಪಾಲಕ್ಕಾಡ್ ನಿಂದ 16 ಯುವಕರು ಇಸೀಸ್ ಉಗ್ರ ಸಂಘಟನೆ ಸೇರಲು ಬಯಸಿದ್ದರು ಅಚ್ಚರಿಯ ವಿಷಯವೆಂದರೆ ಇವರೆಲ್ಲರೂ ಅಕ್ಷರಸ್ಥರಾಗಿದ್ದು, ಯಾರೊಬ್ಬರೂ ಅನಕ್ಷರಸ್ಥರಿರಲಿಲ್ಲ ಎಂದು ತಿಳಿದುಬಂದಿದೆ. 
SCROLL FOR NEXT