ದೇಶ

ವಾರಾಂತ್ಯದ ಮೂರು ದಿನ ತಿರುಪತಿಯಲ್ಲಿ ದಿವ್ಯದರ್ಶನವಿಲ್ಲ: ಟಿಟಿಡಿ

Srinivasamurthy VN

ತಿರುಪತಿ: ಖ್ಯಾತ ಪವಿತ್ರ ಕ್ಷೇತ್ರ ತಿರುಪತಿ ತಿರುಮಲ ದೇವಾಲಯದಲ್ಲಿ ಭಕ್ತರ ಸಾಗರವನ್ನು ತಪ್ಪಿಸುವ ನಿಟ್ಟಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಗಳ ಸಮಿತಿ ವಾರಾಂತ್ಯದ ಮೂರು ದಿನಗಳ ದಿವ್ಯದರ್ಶನವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಮೂಲಗಳ ಪ್ರಕಾರ ಕಾಲ್ಮನಡಿಗೆಯಲ್ಲಿ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇದರಿಂದ ದೇವಾಲಯದಲ್ಲಿ ದರ್ಶನಕ್ಕಾಗಿ ನಿಲ್ಲುವ ಭಕ್ತರ ಸಂಖ್ಯೆ ಗಣನೀಯ ಪ್ರಮಾಣ ಹೆಚ್ಚಾಗುತ್ತಿದೆ.  ಇದೇ ಕಾರಣಕ್ಕೆ ವಾರಾಂತ್ಯದ ಕಡೆಯ 3 ದಿನಗಳಲ್ಲಿ ದಿವ್ಯದರ್ಶನ ಸೇವೆ ನಿಲ್ಲಿಸಲು ಟಿಟಿಡಿ ತೀರ್ಮಾನಿಸಿದೆ.

ಹರಕೆ ತೀರಿಸುವ ಸಲುವಾಗಿ ನಿತ್ಯ 50 ಸಾವಿರಕ್ಕೂ ಅಧಿಕ ಭಕ್ತರು ನಡೆದುಕೊಂಡು ಬೆಟ್ಟಹತ್ತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಬೇರೆ ಯಾತ್ರಿಕರಿಗೆ ಹೋಲಿಸಿದರೆ ಹೀಗೆ ನಡೆದುಬರುವವರಿಗೆ ಬೇಗ ದರ್ಶನ ನೀಡಲಾಗುತ್ತದೆ  ಮತ್ತು 1 ಲಡ್ಡು ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ದಿವ್ಯದರ್ಶನ ಎನ್ನುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂತಹ ಯಾತ್ರಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಕಡಿವಾಣ ಹಾಕಲು ಪ್ರಾಯೋಗಿಕವಾಗಿ ಜುಲೈ 7,8  ಮತ್ತು 9ರಂದು ಹೊಸ ಪದ್ದತಿ ಜಾರಿಗೆ ತರುತ್ತಿದೆ. ಇದರ ಅನ್ವಯ ನಡೆದು ಬರುವವರು ಬೆಟ್ಟದ ಮೇಲೆ ಏರಿದ ಬಳಿಕ ದಿವ್ಯದರ್ಶನಕ್ಕೆ ಬದಲಾಗಿ ಸಾಮಾನ್ಯದರ್ಶನ ಪಡೆಯಬೇಕಾಗುತ್ತದೆ.

SCROLL FOR NEXT