ನವದೆಹಲಿ: ಒಂದು ದೇಶ ಒಂದು ತೆರಿಗೆ ಘೋಷವಾಕ್ಯದಡಿ ದೇಶಾದ್ಯಂತ ಜಾರಿಯಾಗಿರುವ ಜಿಎಸ್‌ಟಿ ತೆರಿಗೆ ಪದ್ಧತಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಭಾರತ ದೇಶ ಈಗಾಗಲೇ ಹೊಸ ತೆರಿಗೆ ವ್ಯವಸ್ಥೆಗೆ ಅಡಿ ಇಟ್ಟಿದೆ.
ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಜಿಎಸ್ ಟಿ ಪ್ರಭಾವ ಇರುತ್ತದೆ. ಇದುವರೆಗೆ ವಸ್ತುಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ವಿಧಾನ ಆಮೂಲಾಗ್ರವಾಗಿ ಬದಲಾಗಲಿದ್ದು, ಹಾಗಾದರೆ ಆ ರೇಟು ಈಗ ಹೇಗಿದೆ..ಇಂದಿನಿಂದ ಹೊಸ ತೆರಿಗೆಗಳು ಹೇಗಿರುತ್ತದೆ. ಆಯಾ ವಸ್ತುಗಳ ಮೇಲಿನ ಈ ಹಿಂದಿನ ತೆರಿಗೆ ಎಷ್ಟಿತ್ತು, ಇನ್ನು ಮುಂದೆ ಎಷ್ಟಿರಲಿದೆ? ಜಿಎಸ್ ಟಿ ಯಲ್ಲಿ ಎಷ್ಟು ಚೆರಿಗೆ ವಿಧಿಸಿದ್ದಾರೆ ಎಂಬುದರ ಸ್ಥೂಲ ಪರಿಚಯ ಇಲ್ಲಿದೆ.
ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಸುಮಾರು 1200 ವಸ್ತುಗಳ ತೆರಿಗೆ ಬದಲಾವಣೆ ಮಾಡಿದ್ದು, ಈ ಪೈಕಿ ನಿತ್ಯ ಬಳಕೆ ವಸ್ತುಗಳ ತೆರಿಗೆ ಏರಿಳಿತವನ್ನು ಮಾತ್ರ ನೀಡಲಾಗಿದೆ.
ಟೀ ಮತ್ತು ಕಾಫಿ ಪೌಡರ್, ಈ ಹಿಂದೆ ಶೇ.29ತೆರಿಗೆ ಇತ್ತು. ಇದೀಗ ಜಿಎಸ್ ಟಿ ಜಾರಿ ಬಳಿಕ ಅದು ಶೇ.18ಕ್ಕೆ ಇಳಿಕೆಯಾಗಿದೆ. ಅಂತೆಯೇ ಸಕ್ಕರೆ ಮೇಲೆ ಈ ಹಿಂದೆ ಶೇ.10ರಷ್ಟು ತೆರಿಗೆ ಇತ್ತು. ಜಿಎಸ್ ಟಿ ಜಾರಿ ಬಳಿಕ ಶೇ.5 ಕ್ಕೆ ಇಳಿಕೆಯಾಗಿದೆ. ಉಳಿದಂತೆ ತುಪ್ಪ, ಈ ಹಿಂದೆ ಶೇ.5 ತೆರಿಗೆ, ಜಿಎಸ್ ಟಿ ಜಾರಿ ಬಳಿಕ ಶೇ.12ಕ್ಕೆ ಏರಿಕೆ, ಬೆಣ್ಣೆ, ಈ ಹಿಂದೆ ಶೇ.14.5 ತೆರಿಗೆ, ಜಿಎಸ್ ಟಿ ಜಾರಿ ಬಳಿಕ ಶೇ.12 ಕ್ಕೆ ಇಳಿಕೆ, ಹೇರ್ ಆಯಿಲ್, ಈ ಹಿಂದೆ ಶೇ.29 ತೆರಿಗೆ, ಜಿಎಸ್ ಟಿ ಜಾರಿ ಬಳಿಕ ಶೇ.18ಕ್ಕೆ ಇಳಿಕೆ, ಟೂತ್‌ಪೇಸ್ಟ್, ಈ ಹಿಂದೆ ಶೇ.29 ತೆರಿಗೆ, ಬಳಿಕ ಶೇ.18ಕ್ಕೆಇಳಿಕೆ, ಸೋಪು, ಈ ಹಿಂದೆ ಶೇ.29 ತೆರಿಗೆ, ಜಿಎಸ್ ಟಿ ಜಾರಿ ಬಳಿಕ ಶೇ.18ಕ್ಕೆಇಳಿಕೆ, ಬ್ರಾಂಡೆಡ್ ಅಕ್ಕಿ, ಈ ಹಿಂದೆ ತೆರಿಗೆ ಇರಲಿಲ್ಲ, ಜಿಎಸ್ ಟಿ ಜಾರಿ ಬಳಿಕ ಶೇ.5ಕ್ಕೆ ಏರಿಕೆ, ಅದರಂತೆ 10 ಕೆ.ಜಿ ರೈಸ್ ಬ್ಯಾಗ್ 25 ರುಪಾಯಿ ಹೆಚ್ಚಾಗಲಿದೆ.
ಇನ್ನು ಚಾಕೊಲೇಟ್, ಬಿಸ್ಕೆಟ್, ಈ ಹಿಂದೆ ಶೇ.29 ತೆರಿಗೆ, ಜಿಎಸ್ ಟಿ ಜಾರಿ ಬಳಿಕ ಶೇ.18ಕ್ಕೆಇಳಿಕೆ, ಬರ್ತ್ ಡೇ, ಇತರೆ ಕೇಕ್‍ಗಳು, ಈ ಹಿಂದೆ ಶೇ.29 ತೆರಿಗೆ, ಜಿಎಸ್ ಟಿ ಜಾರಿ ಬಳಿಕ ಶೇ.18ಕ್ಕೆಇಳಿಕೆ, ಐಸ್ ಕ್ರೀಮ್ಸ್, ಈ ಹಿಂದೆ ಶೇ.29, ಜಿಎಸ್ ಟಿ ಜಾರಿ ಬಳಿಕ ಶೇ.18ಕ್ಕೆಇಳಿಕೆ, ಮೊಬೈಲ್ ಫೋನ್ಸ್, ಈ ಹಿಂದೆ ಶೇ.6, ಜಿಎಸ್ ಟಿ ಜಾರಿ ಬಳಿಕ ಶೇ.12ಕ್ಕೆಏರಿಕೆ, ಕಂಪ್ಯೂಟರ್, ಲ್ಯಾಪ್‌ಟಾಪ್‍ಗಳು, ಈ ಹಿಂದೆ ಶೇ.6 ರಷ್ಟು ತೆರಿಗೆ, ಜಿಎಸ್ ಟಿ ಜಾರಿ ಬಳಿಕ ಶೇ.18ಕ್ಕೆ ಏರಿಕೆ, ಪೀಠೋಪಕರಣಗಳು, ಈ ಹಿಂದೆ ಶೇ.29 ರಷ್ಟು ತೆರಿಗೆ, ಜಿಎಸ್ ಟಿ ಜಾರಿ ಬಳಿಕ ಶೇ.12ಕ್ಕೆಏರಿಕೆ, ಆಯುರ್ವೇದ ಔಷಧಿ, ಈ ಹಿಂದೆ ಶೇ.10, ಜಿಎಸ್ ಟಿ ಜಾರಿ ಬಳಿಕ ಶೇ.12ಕ್ಕೆ ಏರಿಕೆ, ಬ್ರಾಂಡೆಡ್ ನೂಡಲ್ಸ್, ಶೇ.1ರಷ್ಟು ಹೆಚ್ಚಳವಾಗಲಿದೆ.
ಅಂತೆಯೇ ಕೂಲ್ ಡ್ರಿಂಕ್ಸ್ ದರಗಳ ಮೇಲಿನ ತೆರಿಗೆ ಶೇ.1ರಷ್ಟು ಹೆಚ್ಚಳವಾಗಲಿದ್ದು, ಪಿಜ್ಜಾ, ಬರ್ಗರ್ ಮೇಲಿನ ತೆರಿಗೆ, ಶೇ.3ರಷ್ಟು ಇಳಿಕೆಯಾಗಲಿದೆ. ಈ ಹಿಂದೆ ರು.100 ಇದ್ದರೆ, ಜಿಎಸ್ ಟಿ ಜಾರಿ ಬಳಿಕ ರು.97 ಆಗಲಿದೆ. ಚಪ್ಪಲಿ, ಶೂ ಬೆಲೆಗಳಲ್ಲಿನ ಬದಲಾವಣೆ ಹೀಗಿದ್ದು, ರು.1000 ಮೇಲೆ, ಈ ಹಿಂದೆ ಶೇ26.5 ರಷ್ಟು ತೆರಿಗೆ ಇತ್ತು, ಜಿಎಸ್ ಟಿ ಜಾರಿ ಬಳಿಕ ಶೇ.18ಕ್ಕೆಇಳಿಕೆಯಾಗಿದೆ. ರು.500-100 ನಡುವೆ, ಈ ಹಿಂದೆ ಶೇ.5ರಷ್ಟು ತೆರಿಗೆ ಇತ್ತು. ಜಿಎಸ್ ಟಿ ಜಾರಿ ಬಳಿಕ ಶೇ.5ಕ್ಕೆಬದಲಾವಣೆ ಮಾಲಾಗಿಲ್ಲ, ಅಂತೆಯೇ ರು.500ರ ಒಳಗಿನ ವಸ್ತುಗಳ ಮೇಲೆ ಯಾವುದೇ ಬದಲಾವಣೆ ಇಲ್ಲ. ರು.1000ಕ್ಕೂ ಅಧಿಕ ಬೆಲೆ ರೆಡಿಮೇಡ್ ಬಟ್ಟೆ ಬೆಲೆಗಳನ್ನು ಖರೀದಿಸಿದರೆ, ಈ ಹಿಂದೆ ಶೇ.12 ರಷ್ಟು ತೆರಿಗೆ ಇತ್ತು. ಜಿಎಸ್ ಟಿ ಜಾರಿ ಬಳಿಕ 4.5ಶೇ.ಕ್ಕೆಇಳಿಕೆಯಾಗಿದೆ. ರು.100ದ ಒಳಗೆ ಖರೀದಿಸಿದರೆ, ಈ ಹಿಂದೆ ಶೇ.5 ರಷ್ಟು ತೆರಿಗೆ ಇತ್ತು. ಜಿಎಸ್ ಟಿ ಜಾರಿ ಬಳಿಕ 2.5ಶೇ.ಕ್ಕೆಇಳಿಕೆ ಮಾಡಲಾಗಿದೆ.
ಟಿವಿಗಳು: ಈ ಹಿಂದೆ ಶೇ.26 ರಷ್ಟು ತೆರಿಗೆ, ಜಿಎಸ್ ಟಿ ಜಾರಿ ಬಳಿಕ ಶೇ.28ಕ್ಕೆ ಏರಿಕೆ, ವಾಷಿಂಗ್ ಮೆಷಿನ್: ಈ ಹಿಂದೆ ಶೇ.26ರಷ್ಟು ತೆರಿಗೆ ಜಿಎಸ್ ಟಿ ಜಾರಿ ಬಳಿಕ ಶೇ.28 ಕ್ಕೆಏರಿಕೆ, ಫ್ರಿಡ್ಜ್: ಈ ಹಿಂದೆ ಶೇ.26ರಷ್ಟು ತೆರಿಗೆ ಜಿಎಸ್ ಟಿ ಜಾರಿ ಬಳಿಕ ಶೇ.28 ಕ್ಕೆಏರಿಕೆ, ಮೈಕ್ರೋಓವೆನ್: ಈ ಹಿಂದೆ ಶೇ.26ರಷ್ಟು ತೆರಿಗೆ ಜಿಎಸ್ ಟಿ ಜಾರಿ ಬಳಿಕ ಶೇ.28 ಕ್ಕೆಏರಿಕೆ, ವೈದ್ಯ ಉಪಕರಣಗಳು: ಈ ಹಿಂದೆ ಶೇ.18ರಷ್ಟು ತೆರಿಗೆ ಜಿಎಸ್ ಟಿ ಜಾರಿ ಬಳಿಕ ಶೇ.12 ಕ್ಕೆಇಳಿಕೆ, ಸಿಮೆಂಟ್: ಈ ಹಿಂದೆ ಶೇ.29ರಷ್ಟು ತೆರಿಗೆ ಜಿಎಸ್ ಟಿ ಜಾರಿ ಬಳಿಕ ಶೇ.28 ಕ್ಕೆಇಳಿಕೆ, ದೊಡ್ಡ ವಾಹನಗಳು (ಕಮರ್ಷಿಯಲ್): ಈ ಹಿಂದೆ ಶೇ.30ರಷ್ಟು ತೆರಿಗೆ ಜಿಎಸ್ ಟಿ ಜಾರಿ ಬಳಿಕ ಶೇ.28 ಕ್ಕೆಇಳಿಕೆ, SUV ಕಾರುಗಳು: ಈ ಹಿಂದೆ ಶೇ.55ರಷ್ಟು ತೆರಿಗೆ ಜಿಎಸ್ ಟಿ ಜಾರಿ ಬಳಿಕ ಶೇ.43 ಕ್ಕೆಇಳಿಕೆ, ಲಗ್ಜುರಿ ಕಾರುಗಳು: ಈ ಹಿಂದೆ ಶೇ.49ರಷ್ಟು ತೆರಿಗೆ ಜಿಎಸ್ ಟಿ ಜಾರಿ ಬಳಿಕ ಶೇ.43 ಕ್ಕೆಇಳಿಕೆ, ಮೀಡಿಯಂ ಕಾರುಗಳು: ಈ ಹಿಂದೆ ಶೇ.47ರಷ್ಟು ತೆರಿಗೆ ಜಿಎಸ್ ಟಿ ಜಾರಿ ಬಳಿಕ ಶೇ.43 ಕ್ಕೆಇಳಿಕೆ, ಸಣ್ಣಕಾರುಗಳು: ಈ ಹಿಂದೆ ಶೇ.30ರಷ್ಟು ತೆರಿಗೆ ಜಿಎಸ್ ಟಿ ಜಾರಿ ಬಳಿಕ ಶೇ.29 ಕ್ಕೆಇಳಿಕೆ, ಬೈಕ್‌ಗಳು: ಈ ಹಿಂದೆ ಶೇ.30ರಷ್ಟು ತೆರಿಗೆ ಜಿಎಸ್ ಟಿ ಜಾರಿ ಬಳಿಕ ಶೇ.28 ಕ್ಕೆಇಳಿಕೆಯಾಗುತ್ತವೆ.