ದೇಶ

ಕಾಬೂಲ್ ಸ್ಫೋಟ: ರಾಸಾಯನಿಕ ದಾಳಿ ಶಂಕೆ ವ್ಯಕ್ತಪಡಿಸಿದ ಪರಿಕ್ಕರ್

Manjula VN
ನವದೆಹಲಿ: ಕಾಬುಲ್ ಸ್ಫೋಟವೊಂದು ರಾಸಾಯನಿಕ ದಾಳಿಯಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಯಾವುದೇ ದಾಳಿ ಸಂಭವಿಸಿದರು ದಾಳಿ ಎದುರಿಸಲು ಭಾರತ ಸನ್ನದ್ಧವಾಗಿರಬೇಕೆಂದು ಗುರುವಾರ ಹೇಳಿದ್ದಾರೆ. 
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್'ಡಿಒ) ಉದ್ದೇಶಿಸಿ ಮಾತನಾಡಿರುವ ಅವರು, ಆಫ್ಘಾನಿಸ್ತಾನದ ದಕ್ಷಿಣ ಮತ್ತು ಉತ್ತರದ ಭಾಗಗಳಿಂದ ಕೇಳಿ ಬರುತ್ತಿರುವ ವರದಿಗಳನ್ನು ಗಮನಿಸಿದರೆ, ಹಾಗೂ ಸ್ಪೋಟದಿಂದ ಸ್ಥಳೀಯರ ನೋವಿನ ಫೋಟೋಗಳನ್ನು ನೋಡಿದರೆ, ಸ್ಫೋಟವೊಂದು ರಾಸಾಯನಿಕ ದಾಳಿಯಿರಬಹುದೆಂಬ ಶಂಕೆಗಳು ಮೂಡತೊಡಗಿವೆ. ಪ್ರಸ್ತುತ ಈ ಬಗ್ಗೆ ನನ್ನ ಬಳಿ ಯಾವುದೇ ದೃಢೀಕರಣಗಳಿಲ್ಲ. ಆದರೆ, ಫೋಟೋಗಳನ್ನು ನೋಡಿದರೆ ಬಹಳ ನೋವಾಗುತ್ತದೆ ಎಂದು ಹೇಳಿದ್ದಾರೆ. 
ಈ ವರೆಗೂ ನಾವು ಪರಮಾಣು ಅಥವಾ ರಾಸಾಯನಿಕದಂತಹ ಯಾವುದೇ ದಾಳಿಗಳನ್ನು ಎದುರಿಸಿಲ್ಲ. ಕಾಬೂಲ್ ಸ್ಫೋಟವನ್ನು ಗಮನಿಸಿದರೆ, ಈ ರೀತಿಯ ದಾಳಿಗಳು ಸಂಭವಿಸಿದರೆ, ಇಂತಹ ದಾಳಿಗಳನ್ನು ಎದುರಿಸಲು ಸನ್ನದ್ಧರಾಗಿರಬೇಕಿದೆ. ಇಂತಹ ದುರಂತಗಳನ್ನು ಎದುರಿಸಲು ಭಾರತೀಯ ಸೇನೆ ಸದಾ ಸಿದ್ಧರಾಗಿರಬೇಕಿದೆ ಎಂದು ತಿಳಿಸಿದ್ದಾರೆ. 
SCROLL FOR NEXT