ವಾರ್ಷಿಕ ಶೈಕ್ಷಣಿಕ ಶೃಂಗಸಭೆಯಲ್ಲಿ ಮಾತನಾಡುತ್ತಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜವಡೇಕರ್
ಚೆನ್ನೈ: ಪ್ರತೀ ಕ್ಯಾಂಪಸ್ ಗಲಾಟೆಗಳಿಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಎಂದಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿರುತ್ತೇನೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜವಡೇಕರ್ ಅವರು ಶುಕ್ರವಾರ ಹೇಳಿದ್ದಾರೆ.
ಐದನೇ ಆವೃತ್ತಿಯ 'ಥಿಂಕ್ಎಡು ಕಾಂಕ್ಲೇವ್' ವಾರ್ಷಿಕ ಶೈಕ್ಷಣಿಕ ಶೃಂಗಸಭೆಯಲ್ಲಿ 'ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಸಂಪಾದಕ ಜಿಎಸ್. ವಾಸು ಮತ್ತು ಸಂಪಾದೀಯ ನಿರ್ದೇಶಕ ಪ್ರಭು ಚಾವ್ಲಾ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, 2 ರಿಂದ 3 ಕಾಲೇಜುಗಳ ಮಾತ್ರ ಭಿನ್ನಮತೀಯಗಳಾಗಿವೆ. ಇನ್ನೂ 790 ಕಾಲೇಜುಗಳಿದೆ. ಎಲ್ಲರೂ ಪರೀಕ್ಷೆಗಳ ಸಿದ್ಧತೆಯಲ್ಲಿ ಕಾರ್ಯನಿರತರಾಗಿದ್ದಾರೆಂದು ಹಳಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ನಾವು ರೂ.2,60,000 ಹಣವನ್ನು ಖರ್ಚು ಮಾಡುತ್ತಿದ್ದೇವೆ. ಸಮಾಜದಲ್ಲಿರುವ ಬಡವರಿಗಾಗಿ ಈ ಹಣವನ್ನು ನೀಡುತ್ತಿದ್ದೇವೆ. ನಾನೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿದ್ದೇನೆ. ದೇಶವನ್ನು ಒಡೆಯುವ ಪ್ರಯತ್ನಗಳಿಗೆ ಕ್ಷಮೆಯಿಲ್ಲ. ಪಕ್ಷದ ಅಭಿಪ್ರಾಯವನ್ನು ಈಗಾಗಲೇ ನಮ್ಮ ಹಿರಿಯ ನಾಯಕರು ವ್ಯಕ್ತಪಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ನಂಬಿದ್ದೇವೆ. ಆದರೆ, ದೇಶವನ್ನು ಒಡೆಯುವುದರ ಮೇಲಲ್ಲ ಎಂದು ತಿಳಿಸಿದ್ದಾರೆ.
ಇಂದಿರಾ ಗಾಂಧಿಯವರು ಅಧಿಕಾರದಲ್ಲಿದ್ದಾಗ ತುರ್ತುಪರಿಸ್ಥಿತಿ ಸಮಯದಲ್ಲಿ ನಾನೂ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇನೆ. ತಿಂಗಳು ಕಾಲ ನಾನು ಜೈಲಿನಲ್ಲಿ ಕಾಲ ಕಳೆದಿದ್ದೆ. ಸ್ವಾತಂತ್ರ್ಯದ ಕುರಿತು ಹೋರಾಡುವ ಭಿನ್ನಮತೀಯರ ನೋವನ್ನು ನಾನು ಕೂಡ ಅನುಭವಿಸಿದ್ದೇನೆ. ಆಜಾದಿ ಪೋಸ್ಟರ್ ಗಳನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಸುಪ್ರೀಂಕೋರ್ಟ್ ಕೂಡ ಒಪ್ಪಿಕೊಳ್ಳುವುದಿಲ್ಲ. ಇಂತಹ ಪೋಸ್ಟರ್ ಗಳನ್ನು ಯಾರೂ ಒಪ್ಪಿಕೊಳ್ಳುವುದೂ ಇಲ್ಲ ಎಂದಿದ್ದಾರೆ.
ಇದೇ ವೇಳೆ ಪ್ರಣಬ್ ಮುಖರ್ಜಿಯವರ ಹೇಳಿಕೆ ಸಂಬಂಧ ಪ್ರತಿಕ್ರಿಯೆ ಮಾತನಾಡಿದ ಅವರು, ರಾಷ್ಟ್ರಪತಿಗಳ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರೂ ಕೂಡ ಕ್ಯಾಂಪಸ್ ಗಳಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ ಎಂದು ಹೇಳಿರುವುದನ್ನು ನಾವು ನೋಡಬಹುದು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಖಂಡಿಸಿರುವ ಅವರು, ಇದೊಂದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಪ್ರಜಾಪ್ರಭುತ್ವವಾಗಿರುವವರೆಗೂ ಪ್ರತಿಭಟನೆಗ ಸಮಾಜ ವಿರೋಧವಾಗಿರುವುದಿಲ್ಲ. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಉಪಕುಲಪತಿಗಳು ಇಡೀ ರಾತ್ರಿ ಆಹಾರವಿಲ್ಲದೆ. ತಮ್ಮ ಹಿರಿಯ ಸಹೋದ್ಯೋಗಿಗಳೊಂದಿಗೆ ವಿವಿಯಲ್ಲಿಯೇ ಉಳಿದುಕೊಂಡಿದ್ದಾರೆ. ಉಪಕುಲಪತಿಗಳಿಗೆ ಸಕ್ಕರೆ ಕಾಯಿಲೆಯಿದೆ. ಇದು ನಿಜಕ್ಕೂ ಅಪ್ರಜಾಪ್ರಭುತ್ವವಾದದ್ದು. ಮಾನವ ಹಕ್ಕಿಗೆ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಪ್ರತೀಯೊಂದು ಪ್ರತಿಭಟನೆಗಳಿಗೂ ಮಾನವ ಸಂಪನ್ಮೂಲ ಇಲಾಖೆ ಪ್ರತಿಕ್ರಿಯೆ ನೀಡುವುದಿಲ್ಲ. ನಮಗೆ ನಮ್ಮದೇ ಆದಂತಹ ಸಾಕಷ್ಟು ಕೆಲಸ, ಕಾರ್ಯಗಳಿರುತ್ತವೆ. ಇತರರಿಗಿಂತ ನಾವು ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.