ದೇಶ

ಆರ್ಥಿಕ ಕಾರಿಡಾರ್ ಯೋಜನೆಗೆ ಕೈ ಜೋಡಿಸುವಂತೆ ಭಾರತಕ್ಕೆ ಚೀನಾ ಮನವಿ

Sumana Upadhyaya
ನವದೆಹಲಿ: ಪಾಕಿಸ್ತಾನ ಮೂಲಕ ಹಾದುಹೋಗುವ ತನ್ನ ಮಹಾತ್ವಾಕಾಂಕ್ಷಿ ಆರ್ಥಿಕ ಕಾರಿಡಾರ್ ಯೋಜನೆಗೆ ಕೈ ಜೋಡಿಸುವಂತೆ ಭಾರತಕ್ಕೆ ಚೀನಾ ಮನವಿ ಮಾಡಿದ್ದು, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ)ನಿಂದ ಸ್ಥಳೀಯ ಸಂಪರ್ಕಕ್ಕೆ ಉತ್ತೇಜನ ಸಿಕ್ಕಿ ಭಾರತಕ್ಕೆ ಬಹಳ ಪ್ರಯೋಜನವಿದೆ ಎಂದು ಹೇಳಿದೆ.
ಆದರೆ ಭಾರತಕ್ಕಿರುವ ಒಂದು ಆತಂಕವೆಂದರೆ ಈ ಆರ್ಥಿಕ ಕಾರಿಡಾರ್ ಯೋಜನೆ ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಹಾದುಹೋಗುತ್ತದೆ.ಭಾರತದ ಮನವೊಲಿಸಲು ಚೀನಾ ಪ್ರಯತ್ನಿಸುತ್ತಿದೆ ಯಾಕೆಂದರೆ ಭಾರತ ಕೂಡ ಪ್ರಬಲ ಆರ್ಥಿಕ ರಾಷ್ಟ್ರವಾಗಿ ಬೆಳೆಯುತ್ತಿದೆ. ಈ ಯೋಜನೆ ಕೈಗೂಡದಿದ್ದರೆ ಬೀಜಿಂಗ್ ನ ಬೆಲ್ಟ್ ಮತ್ತು ರಸ್ತೆ ಉಪಕ್ರಮ ದೂರದ ಕನಸಾಗಲಿದೆ.
ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ನ ವಕ್ತಾರ ಫು ಯಿಂಗ್ ಮಾತನಾಡಿ, ಬೆಲ್ಟ್ ಅಂಡ್ ರೋಡ್ ಆರ್ಥಿಕ ಬೆಳವಣಿಗೆಗೆ ಸಂಪರ್ಕ ಕಾರ್ಯಕ್ರಮವಾಗಿದ್ದು ಇದರಿಂದ ಭಾರತಕ್ಕೆ ಬಹಳ ಪ್ರಯೋಜನವಿದೆ. ಹೀಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಆರಂಭಿಸುವ ಉದ್ದೇಶ ಹೊಂದಿದ್ದೇವೆ ಎಂದು  ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್, ಆರ್ಥಿಕ ಕಾರಿಡಾರ್ ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ನ ಭಾಗವಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಹಾದುಹೋಗುವುದರಿಂದ ಭಾರತೀಯ ಸೌರ್ವಭೌಮತ್ವವನ್ನು ಉಲ್ಲಂಘಿಸುತ್ತದೆ. ಇಲ್ಲಿ ಸಂಪರ್ಕದ ವಿಷಯ ಬರುವುದಿಲ್ಲ ಎಂದು ಹೇಳಿದ್ದಾರೆ. 
SCROLL FOR NEXT