ಪನ್ನೀರ್ ಸೆಲ್ವಂ 
ದೇಶ

122 ಎಐಎಡಿಎಂಕೆ ಶಾಸಕರು ನೆಮ್ಮದಿಯಾಗಿರಲು ಜಯಾ ಆತ್ಮ ಬಿಡುವುದಿಲ್ಲ: ಪನ್ನೀರ್ ಸೆಲ್ವಂ

ಮಾಜಿ ಸಿಎಂ ಗಳಾದ ಜಯಲಲಿತಾ ಮತ್ತು ಎಂಜಿ ರಾಮಚಂದ್ರನ್ ಆತ್ಮಗಳು, ವಿ.ಕೆ ಶಶಿಕಲಾ ಸೇರಿದಂತೆ ಎಐಎಡಿಎಂಕೆಯ 122 ಶಾಸಕರು ನೆಮ್ಮದಿಯಿಂದ ಇರಲು ...

ಚೆನ್ನೈ: ಮಾಜಿ ಸಿಎಂ ಗಳಾದ ಜಯಲಲಿತಾ ಮತ್ತು ಎಂಜಿ ರಾಮಚಂದ್ರನ್  ಆತ್ಮಗಳು,  ವಿ.ಕೆ ಶಶಿಕಲಾ ಸೇರಿದಂತೆ ಎಐಎಡಿಎಂಕೆಯ 122 ಶಾಸಕರು ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹೇಳಿದ್ದಾರೆ.

ಗ್ರೀನ್ ವೇಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸೆಲ್ವಂ ನಮ್ಮ ಧರ್ಮ ಯುದ್ಧ ಹಲವು ತಿರುವುಗಳನ್ನು ಪಡೆಯಲಿದೆ.ಎಲ್ಲಾ 122 ಶಾಸಕರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗುತ್ತದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಎಂಜಿಆರ್ ಆತ್ಮಗಳು ಶಾಂತಿಯಿಂದ ಬದುಕಲು ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ನನ್ನನ್ನು ಬಲವಂತವಾಗಿ ಸಿಎಂ ಹುದ್ದೆಯಿಂದ ಕೆಳಗಿಳಿಸಿದ ಶಶಿಕಲಾ ಮತ್ತು ಕೆಲವು ಸಚಿವರಿಗೆ ಮತ್ತಷ್ಟು ಕಠಿಣ ಪರಿಸ್ಥಿತಿ ಎದುರಾಗಿ ಇನ್ನಷ್ಟು ಅವಮಾನ ವಾಗುತ್ತದೆ ಎಂದು ಹೇಳಿದ್ದಾರೆ.

ನನ್ನನ್ನು ಕಷ್ಟದ ಪರಿಸ್ಥಿತಿಗೆ ನೂಕಲಾಯಿತು, ನಾನು ಅವಮಾನಕ್ಕೊಳಗಾದೆ, ಶಶಿಕಲಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಒಪ್ಪಿಕೊಂಡ ನಂತರ ಎರಡು ರಾತ್ರಿ ನಿದ್ದೆಯಿಲ್ಲದೇ ಕಳೆದೆ ಎಂದು ಪನ್ನೀರ್ ಸೆಲ್ವಂ ಬೇಸರ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ