ಲಖನೌ: ಉತ್ತರಪ್ರದೇಶದ ಠಾಕೂರ್ ಗಂಜ್ ನ ಕಟ್ಟಡವೊಂದರಲ್ಲಿ ಶಂಕಿತ ಉಗ್ರನೊಬ್ಬ ಅಡಗಿ ಕುಳಿತು ಗುಂಡಿನ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಭಯೋತ್ಪಾದನ ನಿಗ್ರಹ ದಳ ಸಹ ಗುಂಡಿನ ದಾಳಿ ನಡೆಸಿದ್ದಾರೆ.
ಶಂಕಿತ ಉಗ್ರನನ್ನು ಸೈಫುಲ್ ಎಂದು ಎಟಿಎಸ್ ಶಂಕಿಸಿದ್ದು ಕಟ್ಟಡದೊಳಗೆ ಅಡಗಿ ಕುಳಿತಿರುವ ಉಗ್ರನನ್ನು ಸೆರೆಹಿಡಿಯುವ ವಿಶ್ವಾಸವನ್ನು ಹಿರಿಯ ಪೊಲೀಸ್ ಅಧಿಕಾರಿ ದಾಲ್ಜಿತ್ ಚೌಧರಿ ತಿಳಿಸಿದ್ದಾರೆ.
ಉಗ್ರ ಸೈಫುಲ್ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿರುವುದಾಗಿ ತಿಳಿದುಬಂದಿದ್ದು ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ಸುತ್ತುವರೆದಿರುವ ಎಟಿಎಸ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸೈಫುಲ್ ಖಾಂಡ್ವಾ, ಮಧ್ಯಪ್ರದೇಶ ರೈಲು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿಯನ್ನು ಅಧಿಕಾರಗಳು ವ್ಯಕ್ತಪಡಿಸಿದ್ದಾರೆ. ಇನ್ನು ಕಾನ್ಪುರದಲ್ಲಿ ಓರ್ವ ಶಂಕಿತ ಉಗ್ರನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.