ಸಾಂಕೇತಿಕ ಚಿತ್ರ 
ದೇಶ

ಕೇರಳ: ಮುಸ್ಲಿಂ ಅನಾಥಾಶ್ರಮದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; 6 ಮಂದಿ ಯುವಕರ ಬಂಧನ

ಕೇರಳ ರಾಜ್ಯದ ಕುಲ್ಪೆಟ್ಟ ಎಂಬಲ್ಲಿ ಮುಸ್ಲಿಂ ಅನಾಥಾಶ್ರಮದ ಏಳು ಮಂದಿ ಬಾಲಕಿಯರ ಮೇಲೆ ಯುವಕರ...

ಕುಲ್ಪೆಟ್ಟ: ಕೇರಳ ರಾಜ್ಯದ ಕುಲ್ಪೆಟ್ಟ ಎಂಬಲ್ಲಿ ಮುಸ್ಲಿಂ ಅನಾಥಾಶ್ರಮದ ಏಳು ಮಂದಿ ಬಾಲಕಿಯರ ಮೇಲೆ ಯುವಕರ ಗುಂಪು ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ನಿನ್ನೆ ಬೆಳಕಿಗೆ ಬಂದಿದೆ. ಪೊಲೀಸರು ಆರು ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದು, ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ಮುಂದುವರಿದಿದೆ.
ಅನಾಥಾಶ್ರಮದ ಭದ್ರತಾ ಸಿಬ್ಬಂದಿ, ಬಾಲಕಿಯೊಬ್ಬಳು ಹತ್ತಿರದ ಅಂಗಡಿ  ಬಳಿಯಿಂದ ಬರುತ್ತಿರುವುದನ್ನು ನೋಡಿ ಕರೆದು ಕೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರಿಸಿದಾಗ ಹೆಣ್ಣು ಮಕ್ಕಳನ್ನು ಯುವಕರು ಕಳೆದೊಂದು ವರ್ಷದಿಂದ ಪಕ್ಕದ ಅಂಗಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಸಂಸ್ಥೆಯ ಆಡಳಿತಾಧಿಕಾರಿಗಳು ಪೊಲೀಸರ ಬಳಿಗೆ ಹೋಗಿ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅನಾಥಾಶ್ರಮದಲ್ಲಿರುವ ಬಾಲಕಿಯರು ಶಾಲೆಗೆ ಹೋಗುವ ಸಮಯದಲ್ಲಿ ಯುವಕರು ಅವರಿಗೆ ಸಿಹಿತಿಂಡಿ ನೀಡಿ ಅಂಗಡಿಗೆ ಕರೆದು ಪೋರ್ನ್ ಚಿತ್ರ ವೀಕ್ಷಿಸುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಬಾಲಕಿಯರು ದೂರು ನೀಡಿದರೆ ಶಿಕ್ಷೆ ನೀಡುವುದಾಗಿ ಬೆದರಿಸುತ್ತಿದ್ದರಂತೆ. ಬಾಲಕಿಯರೆಲ್ಲ 7,8,9ನೇ ತರಗತಿಯಲ್ಲಿ ಓದುವವರಾಗಿದ್ದಾರೆ.
ಬಾಲಕಿಯರನ್ನು ಪೊಲೀಸರು ನಿನ್ನೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ವಯನಾಡು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಜ್ ಪಾಲ್ ಮೀನಾ ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!