ಪಾಕಿಸ್ತಾನ 
ದೇಶ

ಅಮೆರಿಕ: ಪಾಕ್ ನ್ನು ಭಯೋತ್ಪಾದನೆಯ ಪ್ರವರ್ತಕನನ್ನಾಗಿ ಘೋಷಿಸುವ ಮಸೂದೆ ಮಂಡನೆ

ಅಮೆರಿಕಾದ ಪ್ರಭಾವಿ ಕಾಂಗ್ರೆಸ್ ಸದಸ್ಯರೊಬ್ಬರು ಪಾಕಿಸ್ತಾನವನ್ನು ಭಯೋತ್ಪಾದನೆಯ ಪ್ರವರ್ತಕ ಎಂದು ಘೋಷಿಸುವ ಮಸೂದೆ ಮಂಡಿಸಿದ್ದಾರೆ.

ನವದೆಹಲಿ: ಅಮೆರಿಕಾದ ಪ್ರಭಾವಿ ಕಾಂಗ್ರೆಸ್ ಸದಸ್ಯರೊಬ್ಬರು ಪಾಕಿಸ್ತಾನವನ್ನು ಭಯೋತ್ಪಾದನೆಯ ಪ್ರವರ್ತಕ ಎಂದು ಘೋಷಿಸುವ ಮಸೂದೆ ಮಂಡಿಸಿದ್ದಾರೆ. 
ಪಾಕಿಸ್ತಾನವನ್ನು ಕೇವಲ ಭಯೋತ್ಪಾದನೆಯ ಪ್ರವರ್ತಕ ರಾಷ್ಟ್ರ ಎಂದಷ್ಟೇ ಅಲ್ಲದೇ, ನಂಬಲರ್ಹವಲ್ಲದ ರಾಷ್ಟ್ರ ಎಂದು ಘೋಷಿಸುವುದಕ್ಕೂ ರಿಪಬ್ಲಿಕನ್‌ ಪಕ್ಷದ ಸಂಸದ ಟೆಡ್‌ ಪೋ ಮಸೂದೆಯನ್ನು ಮಂಡಿಸಿದ್ದಾರೆ. ಟೆಡ್ ಪೋ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಉಪಸಮಿತಿಯ ಅಧ್ಯಕ್ಷರೂ ಆಗಿದ್ದು. ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ತೇಜಿಸುವುದಷ್ಟೇ ಅಲ್ಲದೇ ಅಮೆರಿಕಾದ ಶತ್ರುಗಳಿಗೆ ಹಲವು ವರ್ಷಗಳಿಂದ ಕುಮ್ಮಕ್ಕು ನೀಡುತ್ತಿದೆ ಎಂದೂ ಟೆಡ್ ಪೋ ಆರೋಪಿಸಿದ್ದಾರೆ. 
ಒಸಾಮಾ ಬಿನ್ ಲ್ಯಾಡೆನ್ ಗೆ ಆಶ್ರಯ ನೀಡುವುದರಿಂದ ಹಿಡಿದು, ಹಕ್ಕಾನಿ ಉಗ್ರ ಜಾಲದೊಂದಿಗೆ ನಿಕಟ ಸಂಪರ್ಕದ ವರೆಗೆ ಪಾಕಿಸ್ತಾನ ಭಯೋತ್ಪಾದನೆ ವಿಷಯದಲ್ಲಿ ಯಾರೊಂದಿಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದಾಗಿದೆ, ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವುದರಿಂದ ಪಾಕಿಸ್ತಾನಕ್ಕೆ ನೀಡುವ ನೆರವನ್ನು ಸ್ಥಗಿತಗೊಳಿಸಲು ಅಮೆರಿಕಾಗೆ ಇದು ಸೂಕ್ತ ಸಮಯ ಎಂದು ಟೆಡ್ ಪೋ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು