ಗುಂಟೂರು: ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿ ತೆಗೆಯುವ ಗೀಳಿನಿಂದ 15 ವರ್ಷದ ಬಾಲಕ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ರೈಲ್ವೆ ಸ್ಟೇಷನ್ ಗಂಭೀರ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ತೆನಾಲಿ ರೈಲ್ವೆ ಸ್ಟೇಷನ್ ನ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಬೇಕೆಂದು ರೈಲಿನ ಮೇಲೆ ಬಾಲಕ ಹತ್ತಿದಾಗ ಹೈ ಟೆನ್ಷನ್ ವಯರ್ ಗೆ ತಾಗಿ ಪ್ರಜ್ಞೆ ತಪ್ಪಿ ಬಿದ್ದನು. ಇದೀಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ರೈಲ್ವೆ ಪೊಲೀಸರು ಹೇಳುವ ಪ್ರಕಾರ, ತೆನಾಲಿ ಪಟ್ಟಣದ ಮೆಹೆರ್ ಜಾನಿ ಎಂಬಾತ ರೈಲ್ವೆ ನಿಲ್ದಾಣದಲ್ಲಿ ಬಂದು ನಿಂತ ರೈಲಿಗೆ ಹತ್ತಿ ಅಲ್ಲಿಂದ ಸೆಲ್ಫಿ ಫೋಟೋ ತೆಗೆಯುವ ಉತ್ಸಾಹ ತೋರಿದನು. ಈ ಗೂಡ್ಸ್ ರೈಲಿನಲ್ಲಿ ಸೇನಾ ಟ್ಯಾಂಕನ್ನು ಸಾಗಿಸಲಾಗುತ್ತಿತ್ತು.
ಮಾರ್ಚ್ 2014ರಿಂದ ಸೆಪ್ಟೆಂಬರ್ 2016ರವರೆಗೆ ನಮ್ಮ ದೇಶದಲ್ಲಿ ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 126 ಆಗಿವೆ. ಅವರಲ್ಲಿ ಹದಿಹರೆಯದವರು, ಯುವಕ-ಯುವತಿಯರೇ ಹೆಚ್ಚಾಗಿದ್ದಾರೆ.
ರೈಲ್ವೆ ಟ್ರಾಕ್ ಮೇಲೆ, ರೈಲಿನ ಪಕ್ಕ, ಪ್ಲಾಟ್ ಫಾರ್ಮ್ ಗಳಲ್ಲಿ ಸೆಲ್ಫಿ ತೆಗೆಯುವವರಿಗೆ 5 ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ನಿಯಮವನ್ನು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಭಾರತೀಯ ರೈಲ್ವೆ ಜಾರಿಗೆ ಹೊರಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics