ದೇಶ

ಭಾರತೀಯರ ಮೇಲಿನ ಜನಾಂಗೀಯ ದಾಳಿಗಳ ಬಗ್ಗೆ ನಿಗಾವಹಿಸಲಾಗಿದೆ: ಸುಷ್ಮಾ ಸ್ವರಾಜ್

Manjula VN
ನವದೆಹಲಿ: ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೇಲೆ ನಡೆಯುತ್ತಿರುವ ಜನಾಂಗೀಯ ದ್ವೇಷದ ದಾಳಿಗಳ ಬಗ್ಗೆ ವಿದೇಶಾಂಕ ಸಚಿವಾಲ ನಿಗಾವಹಿಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಹೇಳಿದ್ದಾರೆ. 
ಭಾರತೀಯರ ಮೇಲಿನ ಜನಾಂಗೀಯ ದಾಳಿ ಕುರಿತಂತೆ ಲೋಕಸಭೆಯಲ್ಲಿ ಮಾತನಾಡಿರುವ ಅವರು, ಅಮೆರಿದಲ್ಲಿ ನಡೆದ ಭಾರತೀಯ ಮೇಲಿನ ದಾಳಿಯನ್ನು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಂಡಿಸಿದ್ದಾರೆ. ಅಲ್ಲದೆ. ಈ ವಿಷಯದ ಬಗ್ಗೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆಂದು ಹೇಳಿದ್ದಾರೆ. 
ಅಮೆರಿಕದಲ್ಲಿ ದಾಳಿಗೊಳಗಾಗಿ ಹತ್ಯೆಯಾದ ಶ್ರೀನಿವಾಸ್ ಕುಚಿಬೋಟ್ಲಾ ಮತ್ತು ದೀಪಾ ರಾಜ್ ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ವಿಷಯದ ಬಗ್ಗೆ ಅಮೆರಿಕ ಉನ್ನತ ಆಡಳಿತದೊಂದಿಗೆ ಪ್ರಸ್ತಾಪಿಸಿದ್ದೇನೆ. ಭಾರತೀಯರ ಸುರಕ್ಷತೆಯ ಬಗ್ಗೆ ಅಲ್ಲಿನ ಸ್ಥಳೀಯ ಆಡಳಿತಗಳು ಭರವಸೆಯನ್ನು ನೀಡಿವೆ. ನಮ್ಮ ಸಚಿವಾಲಯವೂ ದಾಳಿಯಂತಹ ಘಟನೆಗಳ ಮೇಲೆ ದಿನದ 24 ಗಂಟೆಯೂ ನಿಗಾವಹಿಸಿದೆ ಎಂದು ತಿಳಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಅಮೆರಿಕದಲ್ಲಿ ಹತ್ಯೆ ಮಾಡಲಾಗಿತ್ತು. ನಂತರ ಉದ್ಯಮಿ ಹಾರ್ನಿಷ್ ಪಟೇಲ್ ರನ್ನು ಅಮೆರಿಕದಲ್ಲಿ ಹತ್ಯೆ ಮಾಡಲಾಗಿತ್ತು. ಇದಲ್ಲದೆ, ಭಾರತೀಯರೆಂಬ ಕಾರಣಕ್ಕೆ ನಿಂದಿಸಿದ ಕೆಲ ಪ್ರಕರಣಗಳೂ ಕೂಡ ವರದಿಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ  ದೀಪ್ ರಾಯ್ ಎಂಬ ಸಿಖ್ ವ್ಯಕ್ತಿ ಮೇಲೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ದಾಳಿ ವೇಳೆ ಬಂದೂಕುಧಾರಿ ನಿನ್ನ ದೇಶಕ್ಕೆ ನೀನು ಹೋಗು ಎಂದು ಕೂಗಿದ್ದ. ಅದೃಷ್ಟವಶಾತ್ ದೀಪ್ ರಾಯ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. 
SCROLL FOR NEXT