ಬರ್ಮರ್: ರಾಜಸ್ತಾನದ ಬರ್ಮರ್ ಜಿಲ್ಲೆಯ ಶಿವಕಾರ್ ಕುಡ್ಲಾ ಗ್ರಾಮದಲ್ಲಿ ಸುಕೊಯ್-30 ಎಂಕೆಐ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಸುರಕ್ಷಿತವಾಗಿದ್ದಾರೆ.
ತಾಂತ್ರಿಕ ದೋಷದಿಂದ ಅಪಘಾತವುಂಟಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 10ರಂದು ರಾಜಸ್ತಾನದ ಬರ್ಮರ್ ಸಮೀಪ ಭಾರತೀಯ ವಾಯುಪಡೆಗೆ ಸೇರಿದ ಮಿಗ್-21 ವಿಮಾನ ಅಪಘಾತ ಕ್ಕೀಡಾಗಿತ್ತು. ಅಲ್ಲಿ ಕೂಡ ಇಬ್ಬರೂ ಪೈಲಟ್ ಗಳು ಸುರಕ್ಷಿತವಾಗಿ ಹೊರಬಂದಿದ್ದರು.