ದೇಶ

ಇವಿಎಂ ವಿವಾದ: ಕೇಜ್ರಿವಾಲ್ 'ಗುರು' ಅಣ್ಣಾ ಹಜಾರೆಯವರ ಮಾತನ್ನೇ ಕೇಳುತ್ತಿಲ್ಲ- ಬಿಜೆಪಿ

Manjula VN
ನವದೆಹಲಿ: ಪಂಜಾಬ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲು ಕಂಡಿರುವುದಕ್ಕೆ ವಿದ್ಯುನ್ಮಾನ ಮತ ಯಂತ್ರ (ಇವಿಎಂ)ದಲ್ಲಿದ್ದ ದೋಷವೇ ಕಾರಣ ಎಂದು ಆರೋಪಿಸುತ್ತಿರುವ ಅರವಿಂದ ಕೇಜ್ರಿವಾಲ್ ಅವರು ಸ್ವತಃ ತಮ್ಮ 'ಗುರು' ಅಣ್ಣಾ ಹಜಾರೆಯವರ ಮಾತನ್ನೇ ಕೇಳುತ್ತಿಲ್ಲ ಎಂದು ಬಿಜೆಪಿ ಗುರುವಾರ ಹೇಳಿದೆ. 
ಕೇಜ್ರಿವಾಲ್ ಅವರ ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಆರ್.ಪಿ. ಸಿಂಗ್ ಅವರು, ಕೇಜ್ರಿವಾಲ್ ಅವರು ಮಾತಿಗೆ ನಿಲ್ಲುವಂತಹ ವ್ಯಕ್ತಿಯಲ್ಲ. ಸ್ವತಃ ತಮ್ಮ 'ಗುರು' ಅಣ್ಣಾ ಹಜಾರೆಯವರ ಮಾತನ್ನೇ ಅವರು ಕೇಳುತ್ತಿಲ್ಲ. ಅಣ್ಣಾ ಹಜಾರೆಯವರ ಹೇಳಿಕೆ ಸರಿಯಾಗಿದೆ. ದೊಡ್ಡ ರೀತಿಯಲ್ಲಿ ತಂತ್ರಜ್ಞಾನದ ಪ್ರಗತಿಯಾಗುತ್ತಿರುವ ಸಮಯದಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಗಳನ್ನೇ ಬಳಸಬೇಕು. ಸಮಯ ಹಾಗೂ ಹಣವನ್ನೇಕೆ ವ್ಯರ್ಥಮಾಡಬೇಕೆಂದು ಹೇಳಿದ್ದಾರೆ. 
ಇವಿಎಂ, ಬ್ಯಾಲೆಟ್ ಪೇಪರ್ ಕುರಿತಂತೆ ಹೇಳಿಕೆಗಳನ್ನು ನೀಡುವ ಬದಲು ಮೊದಲು ಕೇಜ್ರಿವಾಲ್ ಅವರು ಮೊದಲು ದೇಶದ ರಾಜಧಾನಿಯ ವ್ಯವಹಾರಗಳ ಕಡೆಗೆ ಗಮನಹರಿಸಬೇಕಿದೆ. 
ಕೇಜ್ರಿವಾಲ್ ಯಾವಾಗಲೂ ಸುಳ್ಳನ್ನೇ ಹೇಳುತ್ತಿರುತ್ತಾರೆ. ಸಾರ್ವಜನಿಕರೇಕೆ ಇವರಿಗೆ ಬೆಂಬಲ ನೀಡಬೇಕು? ಮೊದಲು ಅದನ್ನು ಕೇಜ್ರಿವಾಲ್ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಉತ್ತರಪ್ರದೇಶದ ಬಗ್ಗೆ ಅಷ್ಟೊಂದು ಚಿಂತೆ ಇರುವುದೇ ಆಗಿದ್ದರೆ, ಗೋವಾ ಹಾಗೂ ಪಂಜಾಬ್ ರಾಜ್ಯಗಳಲ್ಲೇ ಅವರು ಸೋಲು ಕಾಣುತ್ತಿದ್ದರು?. ಮೊದಲು ಕೇಜ್ರಿವಾಲ್ ಅವರು ಇದನ್ನು ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ. 
SCROLL FOR NEXT