ಕೇಂದ್ರ ಸಚಿವ ರಾಧಾಕೃಷ್ಣನ್ (ಸಂಗ್ರಹ ಚಿತ್ರ) 
ದೇಶ

ಕೇಂದ್ರ ಸಚಿವ ರಾಧಾಕೃಷ್ಣನ್ ಮೇಲೆ ಚಪ್ಪಲಿ ಎಸೆದ ದುಷ್ಕರ್ಮಿಗಳು!

ಕೇಂದ್ರ ಸಚಿವ ಪೊಣ್ ರಾಧಾಕೃಷ್ಣನ್ ಅವರ ಮೇಲೆ ಗುರುವಾರ ದುಷ್ಕರ್ಮಿಗಳು ಚಪ್ಪಲಿ ಎಸೆದಿರುವ ಘಟನೆ ವರದಿಯಾಗಿದೆ.

ಚೆನ್ನೈ: ಕೇಂದ್ರ ಸಚಿವ ಪೊಣ್ ರಾಧಾಕೃಷ್ಣನ್ ಅವರ ಮೇಲೆ ಗುರುವಾರ ದುಷ್ಕರ್ಮಿಗಳು ಚಪ್ಪಲಿ ಎಸೆದಿರುವ ಘಟನೆ ವರದಿಯಾಗಿದೆ.

ಇತ್ತೀಚೆಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಜೆಎನ್ ಯು ವಿದ್ಯಾರ್ಥಿ ರಾಧಾಕೃಷ್ಣನ್ ಅವರ ಅಂತ್ಯ ಸಂಸ್ಕಾರ ತಮಿಳುನಾಡಿನ ಸೇಲಂ ನಲ್ಲಿ ನಡೆಯುತ್ತಿದ್ದು, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಪೊಣ್  ರಾಧಾಕೃಷ್ಣನ್ ಅವರ ಮೇಲೆ ದುಷ್ಕರ್ಮಿಗಳು ಚಪ್ಪಲಿ ಎಸೆದಿದ್ದಾರೆ. ಕೂಡಲೇ ಅವರನ್ನು ಸುತ್ತುವರೆದ ಪೊಲೀಸರು ಅವರನ್ನು ಬಿಗಿ ಭದ್ರತೆ ನಡುವೆ ಹೊರಗೆ ಕರೆದೊಯ್ದರು. ಚಪ್ಪಲಿ ಎಸೆದಿದ್ದು ಯಾರು ಮತ್ತು ಏತಕ್ಕೆ ಎಂಬ  ವಿಚಾರವನ್ನು ಪೊಲೀಸರು ತನಿಖೆಗೊಳಪಡಿಸಿದ್ದಾರೆ.

ಇದೇ ಸೋಮವಾರ ದೆಹಲಿಯ ಮುನ್ರಿಕ್ ನಲ್ಲಿ ತಮ್ಮ ಕೊಠಡಿಯಲ್ಲಿ ವಿದ್ಯಾರ್ಥಿ ಮುತ್ತು ಕೃಷ್ಣನ್ ಅವರ ಮೃತ ದೇಹ ಪತ್ತೆಯಾಗಿತ್ತು. ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮುತ್ತು ಕೃಷ್ಣನ್ ಶವ ಪತ್ತೆಯಾಗಿತ್ತು, ಮುತ್ತು  ಕೃಷ್ಣನ್ ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಆಪ್ತ ಸ್ನೇಹಿತರಾಗಿದ್ದು, ರೋಹಿತ್ ಸಾವಿನ ಪ್ರಕರಣ ಸಂಬಂಧ ನಡೆದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಹೀಗಾಗಿ ಅವರ ಸಾವಿನ ಹಿಂದೆ  ಷಡ್ಯಂತ್ರವಿದೆ ಎಂದು ಆರೋಪಿಸಿ ಹಲವು ವಿದ್ಯಾರ್ಥಿಗಳು ಸಿಬಿಐ ತನಿಖೆಗೆ ಆಗ್ರಹಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!