ದೇಶ

ಆರೋಗ್ಯ ತಪಾಸಣೆಗೆ ವಿದೇಶಕ್ಕೆ ತೆರಳಲಿರುವ ಸೋನಿಯಾ ಗಾಂಧಿ

Sumana Upadhyaya
ನವದೆಹಲಿ: ಆರೋಗ್ಯ ತಪಾಸಣೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳಲಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಪ್ರಯಾಣಿಸಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಕ್ಕೆ ಆರೋಗ್ಯ ತಪಾಸಣೆಗೆ ಹೋಗಲಿದ್ದಾರೆ. ಅವರ ಜೊತೆ ರಾಹುಲ್ ಗಾಂಧಿ ಕೂಡ ಇಂದು ತೆರಳಬಹುದು ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.
ತಮ್ಮ ಅನಾರೋಗ್ಯ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ 5 ರಾಜ್ಯಗಳ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಸೋನಿಯಾ ಗಾಂಧಿ ಭಾಗವಹಿಸಿರಲಿಲ್ಲ.
SCROLL FOR NEXT