ಸಂಗ್ರಹ ಚಿತ್ರ 
ದೇಶ

ಛತ್ತೀಸ್ಗಢ ಎನ್'ಕೌಂಟರ್: 6 ನಕ್ಸಲರ ಹತ್ಯೆ, 2 ಯೋಧರು ಹುತಾತ್ಮ

ಛತ್ತೀಸ್'ಗಡದ ದಂತೆವಾಡಾ ಜಿಲ್ಲೆಯಲ್ಲಿ ನಡೆದ ನಕ್ಸಲರು ಮತ್ತು ಸೇನಾ ಯೋಧರ ನಡುವಿನ ಗುಂಡಿನ ಚಕಮಕಿಯಲ್ಲಿ 6 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ...

ರಾಯ್ಪುರ: ಛತ್ತೀಸ್'ಗಡದ ದಂತೆವಾಡಾ ಜಿಲ್ಲೆಯಲ್ಲಿ ನಡೆದ ನಕ್ಸಲರು ಮತ್ತು ಸೇನಾ ಯೋಧರ ನಡುವಿನ ಗುಂಡಿನ ಚಕಮಕಿಯಲ್ಲಿ 6 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ. 
ದಂತೆವಾಡಾದಲ್ಲಿ ನಕ್ಸಲರು ಬೀಡು ಬಿಟ್ಟಿರುವ ಕುರಿತಂತೆ ಖಚಿತ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ನಕ್ಸಲರಿಗಾಗಿ ಸಿಆರ್'ಪಿಎಫ್ ಹಾಗೂ ಎಸ್'ಟಿಎಫ್ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಕಾರ್ಯಾಚರಣೆಯಲ್ಲಿ 6 ನಕ್ಸಲರನ್ನು ಹತ್ಯೆ ಮಾಡುವಲ್ಲಿ ಸೇನಾ ಪಡೆ ಯಶಸ್ವಿಯಾಗಿದ್ದು, ಗುಂಡಿನ ಚಕಮಕಿ ವೇಳೆ ಇಬ್ಬರು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ. 
ಎನ್ ಕೌಂಟರ್ ಕುರಿತಂತೆ ಮಾಹಿತಿ ನೀಡಿರುವ ದಂತೆವಾಡ ಪೊಲೀಸ್ ವರಿಷ್ಠಾಧಿಕಾರಿ ಕಮರ್ ಲೋಚನ್ ಕಶ್ಯಪ್ ಅವರು, ಬರೇನ್ ಅರಣ್ಯ ಪ್ರದೇಶದಲ್ಲಿ 50ಕ್ಕೂ ಹೆಚ್ಚು ನಕ್ಸಲರು ಬೀಡು ಬಿಟ್ಟಿರುವ ಕುರಿತಂತೆ ಶನಿವಾರ ಬೆಳಿಗ್ಗೆ ನಮಗೆ ಮಾಹಿತಿ ತಿಳಿದುಬಂದಿತ್ತು. ಹೀಗಾಗಿ ಕಾರ್ಯಾಚರಣೆಗೆ ನಡೆಸಲು ನಾವು ಯೋಜನೆ ರೂಪಿಸಿದ್ದೆವು. ಕಾರ್ಯಾಚರಣೆಗಿಳಿಯುತ್ತಿದ್ದಂತೆಯೇ ನಕ್ಸಲರು ಸೇನಾ ಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಕೂಡಲೇ ಸೇನಾ ದಾಳಿಗೆ ದಿಟ್ಟ ಉತ್ತರವನ್ನು ನೀಡಿದು. ಈ ವೇಳೆ 6 ನಕ್ಸಲರನ್ನು ಸೇನಾ ಪಡೆ ಹತ್ಯೆ ಮಾಡಿದೆ. ಎನ್ ಕೌಂಟರ್ ಸ್ಥಳದಲ್ಲಿ ನಕ್ಸಲರ ಸಮವಸ್ತ್ರಗಳು, ಎಕೆ-47 ರೈಫಲ್ಸ್, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಯೋಧರೂ ಕೂಡ ಹುತಾತ್ಮರಾಗಿದ್ದಾರೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್