ದೇಶ

ಪಾಕ್ ಮಾಧ್ಯಮಗಳು ನಮ್ಮನ್ನು 'ರಾ ಏಜೆಂಟ್' ಎಂದು ಬಿಂಬಿಸಿದ್ದವು: ಮುಸ್ಲಿಂ ಮೌಲ್ವಿ

Manjula VN
ನವದೆಹಲಿ: ಮುಗ್ಧ ಭಾರತೀಯರ ವಿರುದ್ಧ ಪಾಕಿಸ್ತಾನ ಸರ್ಕಾರ ಯಾವ ರೀತಿಯಾಗಿ ಪಿತೂರಿ ನಡೆಸುದೆ ಎಂಬ ಸುಳಿವನ್ನು ನಾಪತ್ತೆಯಾಗಿದ್ದ ಭಾರತೀಯ ಮೌಲ್ವಿಗಳು ಸೋಮವಾರ ಬಹಿರಂಗಪಡಿಸಿದ್ದಾರೆ. 
ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೌಲ್ವಿ ನಿಜೀಮ್ ನಿಜಾಮಿ ಅವರು ಪಾಕಿಸ್ತಾನದಲ್ಲಿ ತಮಗಾದ ಅನುಭವಗಳನ್ನು ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. 
ಪಾಕಿಸ್ತಾನದ ಮಾಧ್ಯಮಗಳು ನಮ್ಮನ್ನು ಭಾರತದ ರಿಸರ್ಚ್ ಆ್ಯಂಡ್ ಅನಲೈಸಿಸ್ ವಿಂಗ್ (ರಾ) ಏಜೆಂಟ್ ಎಂದು ಬಿಂಬಿಸಿದ್ದವು ಎಂದು ನಿಜೀನ್ ನಿಜಾಮಿ ಅವರು ಹೇಳಿದ್ದಾರೆ. 
ಪಾಕಿಸ್ತಾನದಲ್ಲಿ "ಉಮ್ಮತ್' ಎಂಬ ದಿನಪತ್ರಿಕೆಯೊಂದಿದೆ. ನಾವು ಪಾಕಿಸ್ತಾನದಲ್ಲಿ ಸಿಲುಕಿಕೊಂಡಿದ್ದ ವೇಳೆ ಈ ಪತ್ರಿಕೆ ಸುಳ್ಳು ಸುದ್ದಿಯನ್ನು, ಹೇಳಿಕೆಗಳನ್ನು ಪ್ರಕಟಿಸಿತ್ತು. ನಮ್ಮ ಭಾವಚಿತ್ರಗಳನ್ನು ಪ್ರಕಟಿಸಿದ್ದ ಪತ್ರಿಕೆ ನಾವು ರಾ ಏಜೆಂಟ್'ಗಳಾಗಿದ್ದೆವೆಂದು ಹೇಳಿಕೊಂಡಿದ್ದವು. 
ಪ್ರಧಾನಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಶ್ರಮದಿಂದಾಗಿ ನಾವು ಭಾರತಕ್ಕೆ ಹಿಂದಿರುಗಿ ಬಂದಿದ್ದೇವೆ. ಎಲ್ಲರಿಗೂ ಈ ಮೂಲಕ ಧನ್ಯವಾದ ಹೇಳಲು ಇಚ್ಛಿಸುತ್ತೇನೆಂದು ನಿಜಾಮಿಯವರು ತಿಳಿಸಿದ್ದಾರೆ. 
SCROLL FOR NEXT