ಹನ್ಸರಾಜ್ ಅಹಿರ್ 
ದೇಶ

2014-15ರಲ್ಲಿ 77 ದೇಶದ್ರೋಹದ ಪ್ರಕರಣ ದಾಖಲು: ಕೇಂದ್ರ ಸರ್ಕಾರ

2014-15ನೇ ಸಾಲಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 77 ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ ಎಂದು ಮಂಗಳವಾರ ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.

ನವದೆಹಲಿ: 2014-15ನೇ ಸಾಲಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 77 ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ ಎಂದು ಮಂಗಳವಾರ ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿ(ಎನ್ ಸಿಆರ್ ಬಿ) ನೀಡಿರುವ ಮಾಹಿತಿ ಪ್ರಕಾರ, ದೇಶದ್ರೋಹ ಆರೋಪಕ್ಕೆ ಸಂಬಂಧಿಸಿದಂತೆ 2014ರಲ್ಲಿ 47 ಪ್ರಕರಣ ಹಾಗೂ 2015ರಲ್ಲಿ 30 ಪ್ರಕರಣಗಳು ದಾಖಲಾಗಿವೆ ಎಂದು ಗೃಹ ಖಾತೆ ರಾಜ್ಯ ಸಚಿವ ಹನ್ಸರಾಜ್ ಅಹಿರ್ ಅವರು ಇಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
2014ರಲ್ಲಿ ಜಾರ್ಖಂಡ್ ನಲ್ಲಿ ಅತಿ ಹೆಚ್ಚ (18) ದೇಶ ದ್ರೋಹ ಪ್ರಕರಣಗಳು ದಾಖಲಾಗಿದ್ದು, ಬಿಹಾರ(16) ನಂತರದ ಸ್ಥಾನದಲ್ಲಿದೆ. ಆದರೆ 2015ರಲ್ಲಿ ಬಿಹಾರ(9 ಪ್ರಕರಣಗಳು)ದಲ್ಲಿ ಅತಿ ಹೆಚ್ಚು ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ ಎಂದು ಅಹಿರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಡಗುಗಳ ಮೇಲೆ ಇರಾನ್ ದಾಳಿ: 'ಕದನ ವಿರಾಮ ಉಲ್ಲಂಘನೆ ಮೂರ್ಖತನ-ಟ್ರಂಪ್ ಕೆಂಡಾಮಂಡಲ!

Bidadi Township Project: ಸಿಎಂ ಡಿಕೆ ಶಿವಕುಮಾರ್ ಗಾಗಿ ಭೈರಮಂಗಲದಲ್ಲಿ ನಾಳೆ ಸಂಜೆಯವರೆಗೂ ಕಾಯುವೆ- ಕುಮಾರಸ್ವಾಮಿ

Op Sindoor: ವರ್ಷದ ಬಳಿಕ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ, ಆರು ಹುತಾತ್ಮ ಯೋಧರ ಹೆಸರು ಪ್ರಕಟ!

ದೆಹಲಿಗೆ ತಮಿಳುನಾಡು ವಿಶೇಷ ಪ್ರತಿನಿಧಿಯಾಗಿ ಜನ ನಾಯಗನ್ ನಿರ್ಮಾಪಕನ ನೇಮಕ!

ಮುಂದಿನ ಚುನಾವಣೆಯಲ್ಲಿ ನೀನು ಸೋತರೆ HDK ಮನೆಯ ವಾಚ್ ಮೆನ್ ಆಗ್ತೀಯಾ? ಪ್ರದೀಪ್ ಈಶ್ವರ್ ಗೆ JDS ಶಾಸಕನ ಸವಾಲು