ಸಂಗ್ರಹ ಚಿತ್ರ 
ದೇಶ

ಮಹಾರಾಷ್ಟ್ರದಲ್ಲಿ ಹೆಚ್ಚಿದ ಲಾಕ್ ಅಪ್ ಡೆತ್; ಲೋಕಸಭೆಯಲ್ಲಿ ಸತ್ಯ ಒಪ್ಪಿಕೊಂಡ ಸರ್ಕಾರ

ಇತರೆ ರಾಜ್ಯಗಳಿಗೆ ಹೋಲಿಸಿದೆ ಮಹಾರಾಷ್ಟ್ರದಲ್ಲಿಯೇ ಅತೀ ಹೆಚ್ಚು ಲಾಕ್ ಅಪ್ ಡೆತ್ ಆಗಿದೆ ಎಂಬ ಸತ್ಯವನ್ನು ಲೋಕಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಒಪ್ಪಿಕೊಂಡಿದೆ...

ನವದೆಹಲಿ: ಇತರೆ ರಾಜ್ಯಗಳಿಗೆ ಹೋಲಿಸಿದೆ ಮಹಾರಾಷ್ಟ್ರದಲ್ಲಿಯೇ ಅತೀ ಹೆಚ್ಚು ಲಾಕ್ ಅಪ್ ಡೆತ್ ಆಗಿದೆ ಎಂಬ ಸತ್ಯವನ್ನು ಲೋಕಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಒಪ್ಪಿಕೊಂಡಿದೆ. 
ಲೋಕಸಭೆಯ ಪ್ರಶ್ನಾವಳಿ ಅವಧಿಯಲ್ಲಿ ಮಾತನಾಡಿರುವ ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, ಮಹರಾಷ್ಟ್ರದಲ್ಲಿ ರಾಜ್ಯದಲ್ಲಿ ಲಾಕ್ ಅಪ್ ಡೆತ್ ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 
ಕಸ್ಟಡಿ ಸಾವುಗಳ ಕುರಿತಂತೆ ರಾಷ್ಟ್ರದ ಎಲ್ಲಾ ರಾಜ್ಯಗಳ ಅಂಕಿಅಂಶಗಳನ್ನು ಕಿರಣ್ ರಿಜಿಜು ಅವರು ಸಲ್ಲಿಕೆ ಮಾಡಿದ್ದಾರೆ. ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರ ರಾಜ್ಯದಲ್ಲಿ 2013 ರಲ್ಲಿ 35 ಕಸ್ಟಡಿ ಸಾವುಗಳಾಗಿದ್ದು, 2014 ರಲ್ಲಿ 21, 2015ರಲ್ಲಿ 19 ಕಸ್ಟಡಿ ಸಾವುಗಳಾಗಿದೆ ಎಂದು ತಿಳಿಸಲಾಗಿದೆ. 
ರಾಷ್ಟ್ರೀಯ ಮಾನು ಹಕ್ಕುಗಳ ಆಯೋಗ ಹಾಗೂ ಸುಪ್ರೀಂಕೋರ್ಟ್ ನೀಡಿರುವ ಆದೇಶ ಸಂಬಂಧ ಈಗಾಗಲೇ ಪೊಲೀಸರಿಗೆ ಸಾಕಷ್ಟು ಮಾರ್ಗಸೂಚಿ ಹಾಗೂ ನಿರ್ದೇಶನಗಳನ್ನು ನೀಡಲಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಿಜಿಜು ಹೇಳಿದ್ದಾರೆ. 
ನಂತರ ಮಾತನಾಡಿದ ಮುಂಬೈ ಮಾಜಿ ಪೊಲೀಸ್ ಆಯುಕ್ತ ಹಾಗೂ ಬಿಜೆಪಿ ಸದಸ್ಯ ಸದ್ಯಪಾಲ್ ಸಿಂಗ್ ಅವರು, ಮಹಾರಾಷ್ಟ್ರ ಹಾಗೂ ಮುಂಬೈ ಪೊಲೀಸರು ದೇಶದಲ್ಲಿ ಉತ್ತಮ ಪೊಲೀಸ್ ಪಡೆಗಳಾಗಿದ್ದಾರೆ. ಠಾಣೆಯಲ್ಲಿ ಸತ್ತವರೆಲ್ಲರೂ ಲಾಕ್ ಅಪ್ ಡೆತ್ ಆಗಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಕೆಲವರು ನ್ಯಾಯಾಂಗ ಬಂಧನದ ವೇಳೆಯಲ್ಲಿಯೂ ಸಾವನ್ನಪ್ಪಿರುತ್ತಾರೆ. ಇನ್ನೂ ಕೆಲವರು ಅನಾರೋಗ್ಯ ಹಾಗೂ ಸ್ವಾಭಾವಿಕವಾಗಿ ಸಾವನ್ನಪ್ಪಿರುತ್ತಾರೆಂದು ಹೇಳಿದರು. 
ಸತ್ಯಪಾಲ್ ಸಿಂಗ್ ಅವರೊಂದಿಗೆ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್, ಜಾರ್ಖಂಡ್ ಮಾಜಿ ಪೊಲೀಸ್ ಅಧಿಕಾರಿ ವಿ.ಡಿ. ರಾಮ್, ಬಿಜೆಪಿ ಸಂಸದರು ದನಿಗೂಡಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT