ರೈಲಿನಲ್ಲಿ ಆಹಾರದ ದರ ಪಟ್ಟಿ ಬಿಡುಗಡೆ ಮಾಡಿದ ರೈಲ್ವೆ ಸಚಿವಾಲಯ, 50 ರು.ಗೆ ಊಟ, 30 ರು. ತಿಂಡಿ
ರೈಲಿನಲ್ಲಿ ಊಟ, ತಿಂಡಿಯ ಬೆಲೆ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ಮಂಗಳವಾರ ದರ ಪಟ್ಟಿಯನ್ನು....
ನವದೆಹಲಿ: ರೈಲಿನಲ್ಲಿ ಊಟ, ತಿಂಡಿಯ ಬೆಲೆ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ಮಂಗಳವಾರ ದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಂದು ವೇಳೆ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ದರ ವಿಧಿಸಿದರೆ ದೂರು ನೀಡುವಂತೆ ಸಚಿವಾಲಯ ತಿಳಿಸಿದೆ.
ಭಾರತೀಯ ರೈಲ್ವೆಯ ಕೇಟರಿಂಗ ದರ ಪಟ್ಟಿಯನ್ನು ಗಮನಿಸಿ, ಒಂದು ವೇಳೆ ಇದಕ್ಕೂ ಹೆಚ್ಚು ದರ ವಿಧಿಸಿದರೆ @RailMinIndiaಗೆ ದೂರು ನೀಡಿ, ನಿಮಗಾಗಿ ನಾವು 24 ಗಂಟೆ ಕೆಲಸ ಮಾಡುತ್ತೇವೆ ಎಂದು ರೈಲ್ವೆ ಸಚಿವಾಲಯ ಇಂದು ಟ್ವೀಟ್ ಮಾಡಿದೆ.
ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿರುವ ದರ ಪಟ್ಟಿ (ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ)
ಕಾಫೀ, ಟೀ ಗೆ 7 ರುಪಾಯಿ
1 ಲೀಟರ್ ಕುಡಿಯುವ ನೀರಿಗೆ 15 ರುಪಾಯಿ
ಸಸ್ಯಹಾರಿ ತಿಂಡಿಗೆ 30 ರುಪಾಯಿ
ಮಾಂಸಹಾರಿ ತಿಂಡಿಗೆ 35 ರುಪಾಯಿ
ಸಸ್ಯಹಾರಿ ಊಟಕ್ಕೆ 50 ರುಪಾಯಿ
ಮಾಂಸಹಾರಿ ಊಟಕ್ಕೆ 55 ರುಪಾಯಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.