ನವದೆಹಲಿ: ಪೂರ್ವ ದೆಹಲಿಯ ಪ್ರೀತ್ ವಿಹಾರ್ ಸಮೀಪ ವಿ3ಎಸ್ ಮಾಲ್ ಹೊರಗೆ ಇಂದು ನಸುಕಿನ ಜಾವ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಈ ಘಟನೆ ಮಧ್ಯರಾತ್ರಿ ಸುಮಾರು 2 ಗಂಟೆಗೆ ನಡೆದಿದ್ದು 29 ವರ್ಷದ ವಿಶಾಲ್ ಸೂರಿ ಮತ್ತು ಆತನ ಇನ್ನಬ್ಬರು ಸ್ನೇಹಿತರು ಆಹಾರ ಸೇವಿಸಲೆಂದು ವಿ3ಎಸ್ ಮಾಲ್ ಸಮೀಪ ಬಂದಿದ್ದರು. ತಮ್ಮ ಕಾರಿನ ಹತ್ತಿರ ನಿಂತಿದ್ದಾಗ ವಿಶಾಲ್ ಮೇಲೆ ಯಾರೋ ಗುಂಡು ಹಾರಿಸಿದರು. ಆ ವೇಳೆ ಸ್ನೇಹಿತರು ಆಹಾರ ತರಲೆಂದು ಮಾಲ್ ಗೆ ತೆರಳಿದ್ದರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಮೂರು ಗುಂಡುಗಳು ಶರೀರದ ಮೇಲೆ ಬಿದ್ದಿದ್ದರಿಂದ ವಿಶಾಲ್ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು.
ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪ್ರೀತ್ ವಿಹಾರ್ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.