ನವದೆಹಲಿ: ಬಾಂಗ್ಲಾದೇಶದ ಗಣರಾಜ್ಯೋತ್ಸವದ ಅಂಗವಾಗಿ ತಮ್ಮ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಅಲ್ಲಿನ ಸರ್ಕಾರ ಮತ್ತು ಜನತೆಗೆ ತಿಳಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಆಸಕ್ತಿಕರ ವಿಷಯಗಳಲ್ಲಿ ಪರಸ್ಪರ ಸಹಕಾರ ವಿಸ್ತರಣೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ಯಶಸ್ವಿಯಾಗಿವೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ರಾಷ್ಟ್ರಪತಿ ಎಮ್ ಡಿ. ಅಬ್ಲುಲ್ ಹಮೀದ್ ಅವರಿಗೆ ಕಳುಹಿಸಿರುವ ಸಂದೇಶದಲ್ಲಿ ರಾಷ್ಟ್ರಪತಿ, ಸರ್ಕಾರದ ಮತ್ತು ಭಾರತ ದೇಶದ ಜನರ ಪರವಾಗಿ ನಾನು ಬಾಂಗ್ಲಾದೇಶದ ಗಣರಾಜ್ಯೋತ್ಸವದ ಪ್ರಯುಕ್ತ ಖುಷಿಯಿಂದ ಶುಭಾಶಯ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳ ಸಂಬಂಧ ವಿಸ್ತರಿಸಿದ್ದು,ಇಂದು ಮಂದುವರಿಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.