ದೇಶ

ಐಪಿಎಲ್ ಪಂದ್ಯದಲ್ಲಿ ಚೀಯರ್ ಗರ್ಲ್ಸ್ ಬೇಡವೆಂದರೆ ರಾಮನ ಹಾಡುಗಳನ್ನು ಹಾಕಿ:ದಿಗ್ವಿಜಯ್ ಸಿಂಗ್

Sumana Upadhyaya
ಇಂದೋರ್: ಟ್ವಂಟಿ-20 ಪಂದ್ಯಗಳ ಸಮಯದಲ್ಲಿ ಐಪಿಎಲ್ ಆಯೋಜಕರು ಚಿಯರ್ ಗರ್ಲ್ಸ್ ಗಳನ್ನು ಮೈದಾನದ ಪಕ್ಕ ಕುಣಿಸುವ ಬದಲು ರಾಮ ದೇವರನ್ನು ಹೊಗಳುವ ಹಾಡುಗಳನ್ನು ಹಾಡಿಸಿ, ನೃತ್ಯ ಮಾಡಿಸಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸಲಹೆ ನೀಡಿದ್ದಾರೆ.
ಜನಪ್ರಿಯ ಟಿ-20 ಪಂದ್ಯಗಳಲ್ಲಿ ಚಿಯರ್ ಲೀಡರ್ಸ್ ಗಳನ್ನು ಕುಣಿಸುವುದನ್ನು ಇಷ್ಟಪಡುವುದ ಕಾರಣ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮುಂದಿನ ತಿಂಗಳು ಇಂದೋರ್ ನಲ್ಲಿ ನಡೆಯಲಿರುವ ಮೂರು ಐಪಿಎಲ್ ಪಂದ್ಯಗಳಿಗೆ ತೆರಿಗೆ ವಿನಾಯ್ತಿ ನೀಡಲು ಬಯಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಸಿಂಗ್, ಐಪಿಎಲ್ ಮ್ಯಾಚ್ ಗೆ ಮನರಂಜನಾ ತೆರಿಗೆ ವಿನಾಯ್ತಿ ನೀಡಲು ಏನು ಸಮಸ್ಯೆ? ಐಪಿಎಲ್ ಪಂದ್ಯಗಳಲ್ಲಿ ಆಟಗಾರರು 4, ಸಿಕ್ಸರ್ ಹೊಡೆದಾಗ ಅಥವಾ ವಿಕೆಟ್ ಬಿದ್ದಾಗ ಚಿಯರ್ ಲೀಡರ್ಸ್ ಕುಣಿಯುವುದು ಇಷ್ಟವಿಲ್ಲ ಎಂದಾದರೆ ರಾಮ ದೇವರನ್ನು ಹೊಗಳುವ ಹಾಡು ಹಾಕಲಿ, ನೃತ್ಯ ಮಾಡಲಿ ಎಂದು ಸಲಹೆ ನೀಡಿದರು.
ಟಿ-20 ಪಂದ್ಯಗಳಿಗಿರುವ ಅಭಿಮಾನ, ಜನಪ್ರಿಯತೆಯನ್ನು ಆಧರಿಸಿ ಮನರಂಜನಾ ತೆರಿಗೆ ವಿನಾಯ್ತಿ ನೀಡಬೇಕೆಂದು ಒತ್ತಾಯಿಸಿದರು.
 ಮೂರು ಐಪಿಎಲ್ ಪಂದ್ಯಗಳು ಹೊಲ್ಕರ್ ಸ್ಟೇಡಿಯಂನಲ್ಲಿ ಮುಂದಿನ ತಿಂಗಳು 8,10 ಮತ್ತು 20ರಂದು ನಡೆಯಲಿದೆ.
SCROLL FOR NEXT