ದೇಶ

ಶ್ರೀಲಂಕಾ ವಿದ್ಯಾರ್ಥಿಗಳಿಗೆ ಐಐಟಿ ಪ್ರವೇಶ ಪರೀಕ್ಷೆ: ಕೇಂದ್ರ ಸರ್ಕಾರ

Sumana Upadhyaya
ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಶ್ರೀಲಂಕಾ ವಿದ್ಯಾರ್ಥಿಗಳಿಗೆ ಮೇ 21ರಂದು ಪ್ರವೇಶ ಪರೀಕ್ಷೆ ನಡೆಸಲು  ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರವೇಶ ಬಯಸಿರುವ ಶ್ರೀಲಂಕಾದ ವಿದ್ಯಾರ್ಥಿಗಳು ಭಾರತದ ವಿದ್ಯಾರ್ಥಿಗಳ ಜೊತೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಭಾರತದ ವಿದ್ಯಾರ್ಥಿಗಳು ಎದುರಿಸುವ ಐಐಟಿ ಜೆಇಇ(ಮುಖ್ಯ) ಪರೀಕ್ಷೆಯಿಂದ ಶ್ರೀಲಂಕಾ ವಿದ್ಯಾರ್ಥಿಗಳಿಗೆ ವಿನಾಯ್ತಿ ನೀಡಲಾಗಿದೆ.
ಐಐಟಿ ಜೆಇಇ( ಸುಧಾರಿತ) ಪರೀಕ್ಷೆಗಳಿಗೆ ಅರ್ಜಿಗಳನ್ನು ಏಪ್ರಿಲ್ 28ರಿಂದ ಮೇ 2ರವರೆಗೆ ಸಲ್ಲಿಸಬಹುದು. ಜಿಸಿಇ ಎ ಹಂತದ ಪರೀಕ್ಷೆ ಮುಗಿಸಿದವರು www.jeeadv.ac.in ಮತ್ತು jeeadv.ac.in/pdf/foreign.pdffor ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 
ಭಾರತದಲ್ಲಿರುವ 23 ಐಐಟಿಗಳಲ್ಲಿ 4 ವರ್ಷದ ಪದವಿ, 5 ವರ್ಷದ ಪದವಿ, 5 ವರ್ಷದ ಡಬಲ್ ಡಿಗ್ರಿ ಮತ್ತು 5 ವರ್ಷದ ಸಮಗ್ರ ಸ್ನಾತಕೋತ್ತರ ಪದವಿ ನೀಡಲಾಗುತ್ತದೆ.
SCROLL FOR NEXT