ನವದೆಹಲಿ: ರಾಜ್ಯಸಭೆ ಮಾಡಿದ ಎಲ್ಲಾ 5 ತಿದ್ದುಪಡಿಗಳನ್ನು ಲೋಕಸಭೆ ನಿರಾಕರಿಸುವ ಮೂಲಕ ಸಂಸತ್ತಿನಲ್ಲಿ ಇಂದು ಹಣಕಾಸು ಮಸೂದೆ 2017 ಅಂಗೀಕಾರಗೊಂಡಿದೆ.
ರಾಜ್ಯಸಭೆಯ ತಿದ್ದುಪಡಿ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮೇಲ್ಮನೆಯ ತಿದ್ದುಪಡಿಗಳನ್ನು ಸ್ವೀಕರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಮಸೂದೆ ಮೇಲಿನ ಚರ್ಚೆ ಆರಂಭಿಸಿದ ಕಾಂಗ್ರೆಸ್ ನ ದೀಪೇಂದ್ರ ಹೂಡಾ ರಾಜ್ಯಸಭೆಯ ತಿದ್ದುಪಡಿಯನ್ನು ಬೆಂಬಲಿಸಿದರು. ಹಣಕಾಸು ಮಸೂದೆ ಮೂಲಕ ವಿವಿಧ ಕಾನೂನುಗಳಿಗೆ 40 ತಿದ್ದುಪಡಿಗಳ ಪ್ರಸ್ತಾವನೆ ಮಾಡಿದ ಸರ್ಕಾರವನ್ನು ಪ್ರಶ್ನಿಸಿದರು.
ಚುನಾವಣಾ ನಿಧಿಗಾಗಿ ಪ್ರತ್ಯೇಕ ಕಾನೂನಿಗೆ ಅವರು ಒತ್ತಾಯಿಸಿದರು. ರಾಜಕೀಯ ಪಕ್ಷಗಳು ಹಣ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕೆಂದು ಬಿಜೆಪಿ ನಾಯಕ ಬಾರ್ತುಹರಿ ಮಹತಾಬ್ ಹೇಳಿದರು.
ನಿನ್ನೆ 5 ತಿದ್ದುಪಡಿಗಳನ್ನು ಸೂಚಿಸಿ ಹಣಕಾಸು ಮಸೂದೆ-2017ನ್ನು ರಾಜ್ಯಸಭೆ ಲೋಕಸಭೆಗೆ ಕಳುಹಿಸಿತ್ತು.ಆದರೆ ಅದನ್ನು ಲೋಕಸಭೆ ಇಂದು ಧ್ವನಿಮತದ ಮೂಲಕ ತಿರಸ್ಕರಿಸಿ ಹಣಕಾಸು ಮಸೂದೆಗೆ ಅಂಗೀಕಾರ ನೀಡಿ ಬಜೆಟ್ ಕಾರ್ಯವನ್ನು ಮುಗಿಸಿತು.
ಇಂದು ರಾಜಕೀಯ ಪಕ್ಷಗಳಿಗೆ ಹರಿದು ಬರುತ್ತಿರುವ ಹಣವು ಅಪಾರದರ್ಶಕವಾಗಿದೆ. ಬಜೆಟ್ ಪ್ರಸ್ತಾವನೆ ಪರವಾಗಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳಿಗೆ ಹಣ ಒದಗಿಸುವ ದಾನಿಗಳ ಸಂಖ್ಯೆಯನ್ನು ಸೀಮಿತಗೊಳಿಸುವುದರಿಂದ ರಾಜ್ಯಸಭೆಯಲ್ಲಿ ಮಾಡಿರುವ ತಿದ್ದುಪಡಿಯನ್ನು ಸ್ವೀಕಚುರಿಸಲಾಗುವುದಿಲ್ಲ ಎಂದು ಹೇಳಿದರು.
ಅಂಗೀಕಾರಗೊಂಡ ಮಸೂದೆಗಳು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ, ಸಮಗ್ರ ಜಿ.ಎಸ್.ಟಿ ಮಸೂದೆ, ಕೇಂದ್ರಾಡಳಿತ ಜಿಎಸ್‍ಟಿ ಮಸೂದೆ ಮತ್ತು ಜಿಎಸ್‍ಟಿ ಪರಿಹಾರ ಮಸೂದೆಗಳಾಗಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos