ಮುಲಾಯಂ ಸಿಂಗ್ ಯಾದವ್ 
ದೇಶ

ಅಖಿಲೇಶ್ ಅವಮಾನ ಮಾಡಿದಷ್ಟು ಬೇರೆ ಯಾರೂ ನನಗೆ ಮಾಡಿಲ್ಲ: ಮುಲಾಯಂ ಸಿಂಗ್ ಯಾದವ್

ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ನಡುವಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಬಹಿರಂಗವಾಗಿದೆ.

ಲಖನೌ: ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ನಡುವಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಬಹಿರಂಗವಾಗಿದ್ದು, ಮುಲಾಯಂ ಸಿಂಗ್ ಅಖಿಲೇಶ್ ಯಾದವ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ನನಗೆ ಅಖಿಲೇಶ್ ಯಾದವ್ ಮಾಡಿರುವಷ್ಟು ಅವಮಾನವನ್ನು ಬೇರೆ ಯಾರೂ ಮಾಡಿಲ್ಲ. " ತಂದೆಗೇ ಅವಮಾನ ಮಾಡಿದವರು ರಾಜ್ಯದ ಜನತೆಗೆ ಹೇಗೆ ನಿಷ್ಠರಾಗಿರುತ್ತಾರೆ ಎಂದು ಉತ್ತರ ಪ್ರದೇಶ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮೋದಿ ಹೇಳಿದ್ದರು. ಮಗನ ಕುರಿತ ಮೋದಿ ಹೇಳಿಕೆಯನ್ನು ಬೆಂಬಲಿಸಿರುವ ಮುಲಾಯಂ ಸಿಂಗ್ ಯಾದವ್, ಮೋದಿ ಹೇಳಿರುವುದು ಸರಿಯಾಗಿದೆ. ತಂದೆಗೇ ಅವಮಾನ ಮಾಡಿದವರು ಉಳಿದವರಿಗೆ ಹೇಗೆ ನಿಷ್ಠರಾಗಿರುವುದಕ್ಕೆ ಸಾಧ್ಯ ಎಂದು ಮುಲಾಯಂ ಸಿಂಗ್ ಯಾದವ್ ಪ್ರಶ್ನಿಸಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರು ಅಖಿಲೇಶ್ ಯಾದವ್ ಅವರ ಕುರಿತು ಹೇಳಿಕೆ ನೀಡಿರುವ ಮತದಾರರ ಮೇಲೆ ಪರಿಣಾಮ ಬೀರಿದ್ದು, ಸಮಾಜವಾದಿ ಪಕ್ಷಕ್ಕೆ ಹೊಡೆತ ಬಿದ್ದಿದೆ. "ರಾಜಕೀಯದಲ್ಲಿ ಸಕ್ರಿಯವಾಗಿದ್ದುಕೊಂಡು ಮಗನನ್ನು ಮುಖ್ಯಮಂತ್ರಿಯನ್ನಾಗಿಸಿದ ಉದಾಹರಣೆ ದೇಶದ ಇತಿಹಾಸದಲ್ಲೇ ಇಲ್ಲ. 2012 ರಲ್ಲಿ ಮುಖ್ಯಮಂತ್ರಿಯಾಗುವಂತೆ ಜನತೆ ನನಗೆ ಆದೇಶ ನೀಡಿದ್ದರು. ನಾನು ಅಖಿಲೇಶ್ ಯಾದವ್ ನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಆದರೆ ಅಖಿಲೇಶ್ ಯಾದವ್ ನನಗೆ ಯಾರೂ ಮಾಡದ ರೀತಿಯಲ್ಲಿ ಅವಮಾನ ಮಾಡಿದರು ಎಂದು ಮುಲಾಯಂ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ