ದೇಶ

2017 ರಲ್ಲಿ 600 ಗ್ರಾಮಗಳನ್ನು ಡಿಜಿಟಲ್ ಸಶಕ್ತಗೊಳಿಸಲಿರುವ ಐಸಿಐಸಿಐ

Srinivas Rao BV
ನವದೆಹಲಿ: ಈಗಾಗಲೇ 100 ಗ್ರಾಮಗಳನ್ನು ಡಿಜಿಟಲೀಕರಣಗೊಳಿಸಿರುವುದಾಗಿ ಹೇಳಿರುವ ಐಸಿಐಸಿಐ ಬ್ಯಾಂಕ್ ವರ್ಷಾಂತ್ಯಕ್ಕೆ 500 ಗ್ರಾಮಗಳನ್ನು ಡಿಜಿಟಲೀಕರಣಗೊಳಿಸುವುದಾಗಿ ಹೇಳಿದೆ. 
100 ಗ್ರಾಮಗಳಿಗೆ ಡಿಜಿಟಲ್ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, "ಐಸಿಐಸಿಐ ನ ಮಾದರಿಯನ್ನು ಉಳಿದ ಬ್ಯಾಂಕ್ ಗಳೂ ಸಹ ಅನುಸರಿಸಬೇಕು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕ ಒಳಾಗೂಡುವಿಕೆ ಯೋಜನೆಗೆ ಕ್ರಮ ಕೈಗೊಂಡಿದ್ದು, ಪ್ರತಿಯೊಂದು ಮನೆಗೂ ಒಂದು ಬ್ಯಾಂಕ್ ಖಾತೆ ಇರುವಂತಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ. 
ಜನರು ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮುಂದಿದ್ದಾರೆ, ಡಿಜಿಟಲೀಕರಣದಿಂದ ಹೊಸ ತಂತ್ರಜ್ಞಾನಗಳು ಪರಿಚಯವಾಗಿವೆ. ಆರ್ಥಿಕ ಸುಧಾರಣೆಯ ಕ್ರಮಗಳು ಗ್ರಾಮಗಳಿಗೂ ತಲುಪುತ್ತಿವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಇದೇ ವೇಳೆ ಮಾತನಾಡಿರುವ ಐಸಿಐಸಿಐ ಬ್ಯಾಂಕ್ ಎಂಡಿ ಹಾಗೂ ಸಿಇಒ ಚಂದಾ ಕೊಚ್ಚಾರ್ 100 ದಿನಗಳಲ್ಲಿ ಐಸಿಐಸಿಐ ಬ್ಯಾಂಕ್ 100 ಗ್ರಾಮಗಳನ್ನು ಡಿಜಿಟಲೀಕರಣಕ್ಕೆ ರೂಪಾಂತರಗೊಳಿಸಿದೆ. ವರ್ಷಾಂತ್ಯಕ್ಕೆ 500 ಗ್ರಾಮಗಳನ್ನು ಡಿಜಿಟಲ್ ಸಶಕ್ತಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ. 
SCROLL FOR NEXT