ದೇಶ

ಆಧಾರ್-ಪ್ಯಾನ್ ಸಂಖ್ಯೆ ಸಂಪರ್ಕ: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Sumana Upadhyaya
ನವದೆಹಲಿ: ಪ್ಯಾನ್ ಸಂಖ್ಯೆ ಮತ್ತು ತೆರಿಗೆ ಸಲ್ಲಿಕೆಗೆ ಆಧಾರ್ ಕಡ್ಡಾಯಗೊಳಿಸಬೇಕೆ ಬೇಡವೆ ಎಂಬ ಬಗ್ಗೆ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ಅರ್ಜನ್ ಕುಮಾರ್ ಸಿಕ್ರಿ ಮತ್ತು ಅಶೋಕ್ ಭೂಶಣ್ ಅವರನ್ನೊಳಗೊಂಡ ನ್ಯಾಯಪೀಠ, ಎಲ್ಲಾ ಸಂಬಂಧಪಟ್ಟ ಪಕ್ಷಗಳಿಗೆ ತಮ್ಮ ಸಂಬಂಧಿಸಿದ ಲಿಖಿತ ಸಲ್ಲಿಕೆಗಳನ್ನು ಮುಂದಿನ ಮಂಗಳವಾರದೊಳಗೆ ಸಲ್ಲಿಸುವಂತೆ ತಿಳಿಸಿದೆ.
ಅಟೊರ್ನಿ ಜನರಲ್ ಮುಕುಲ್ ರೊಹಟ್ಗಿ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿ ಆಧಾರ್ ಸಂಖ್ಯೆ ವಿಶಿಷ್ಟವಾಗಿದ್ದು ಅದನ್ನು ನಕಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅನೇಕ ಅರ್ಜಿದಾರರ ಪರ ನ್ಯಾಯಾಲಯಕ್ಕೆ ಹಾಜರಾದ ವಕೀಲರು, ವ್ಯವಸ್ಥೆ ಪೂರ್ಣವಾಗಿ ಪುರಾವೆಯಿಲ್ಲದಾಗಿದ್ದು, ನಕಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ಯಾನ್ ಕಾರ್ಡಿಗೆ ಮತ್ತು ತೆರಿಗೆ ಪಾವತಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ರೊಹಟ್ಗಿ ಬೆಂಬಲಿಸಿದ್ದರು. ದೇಶಾದ್ಯಂತ ನಕಲಿ ಪ್ಯಾನ್ ಕಾರ್ಡುಗಳ ಬಳಕೆಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳುವುದು ಸ್ವಾಗತಾರ್ಹ ಎಂದು ಹೇಳಿದ್ದರು.
SCROLL FOR NEXT