ನವದೆಹಲಿ: ಮೇ.4 ರಂದು 2017 ನೇ ಸಾಲಿನ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯ ಪಟ್ಟಿ ಬಿಡುಗಡೆಯಾಗಿದ್ದು, ಮಧ್ಯಪ್ರದೇಶದ ಇಂದೋರ್ ಹಾಗೂ ಭೋಪಾಲ್ ದೇಶದ ಅತ್ಯಂತ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಕಾರ್ಯಕ್ರಮ ಹಮ್ಮಿಕೊಂಡ ನಂತರ ಪ್ರಕಟಾಗೊಂಡಿರುವ ಎರಡನೇ ವರ್ಷದ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ಇದಾಗಿದ್ದು, ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯ ನಾಯ್ಡು, ಟಾಪ್ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಟ್ಟಾರೆ ಫಲಿತಾಂಶ ಸಮಾಧಾನಕರವಾಗಿದ್ದು, 2014 ರಿಂದ ನಂತರವಷ್ಟೇ ಹಲವು ನಗರಗಳು ಸುಧಾರಣೆ ಕಂಡಿದೆ.
ಸ್ವಚ್ಛ ಭಾರತದಲ್ಲಿ ತೊಡಗಿರುವ ಪ್ರತಿಯೊಬ್ಬ ಪ್ರಜೆಯ ಶ್ರಮ ಈ ಯೋಜನೆಗೆ ಮಹಾಯಜ್ಞದ ರೂಪ ನೀಡಿದ್ದು, 2019 ರ ವೇಳೆಗೆ ಭಹರತವನ್ನು ಸ್ವಚ್ಛ ದೇಶವನ್ನಾಗಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಗುಜರಾತ್, ಆಂಧ್ರಪ್ರದೇಶ, ಮಧ್ಯಪ್ರದೇಶ ಭರವಸೆಯ ಫಲಿತಾಂಶ ನೀಡಿದ್ದು, ಪಟ್ಟಿಯಲ್ಲಿ 50 ನಗರಗಳನ್ನು ಹೊಂದಿವೆ. ಈ ಪೈಕಿ ಗುಜರಾತ್ ಅತ್ಯಂತ ಹೆಚ್ಚು ಅಂದರೆ 12 ಸ್ವಚ್ಛ ನಗರಗಳನ್ನು ಹೊಂದಿದ್ದು ಮಧ್ಯಪ್ರದೇಶ 11 ಸ್ವಚ್ಛ ನಗರಗಳನ್ನು ಹೊಂದಿದ್ದರೆ ಆಂಧ್ರಪ್ರದೇಶದಲ್ಲಿ 8 ಮಾದರಿ ಸ್ವಚ್ಛ ನಗರಗಳಿವೆ.
ಕಳೆದ ಬಾರಿಗಿಂತ ಈ ಬಾರಿ ಉತ್ತರ ಪ್ರದೇಶ ಸುಧಾರಣೆ ಕಂಡಿದ್ದು 2017 ನೇ ಸಾಲಿನ ಟಾಪ್ 30 ಸ್ವಚ್ಛ ನಗರಗಳ ಪಟ್ಟಿ ಇಂತಿದೆ.
- ಇಂದೊರ್
- ಭೋಪಾಲ್
- ವಿಶಾಖಪಟ್ಟಣಂ
- ಸೂರತ್
- ಮೈಸೂರು
- ತಿರುಚಿರಪಳ್ಳಿ
- ನವದೆಹಲಿ
- ನವಿ ಮುಂಬೈ
- ತಿರುಪತಿ
- ವಡೋದರ
- ಚಂಡೀಗಢ
- ಉಜ್ಜಯಿನಿ
- ಪುಣೆ
- ಅಹಮದಾಬಾದ್
- ಅಂಬಿಕಾಪುರ್
- ಕೊಯಂಬತ್ತೂರ್
- ಖರ್ಗೋನ್
- ರಾಜ್ ಕೋಟ್
- ವಿಜಯವಾಡ
- ಗಾಂಧಿನಗರ
- ಜಬಲ್ ಪುರ
- ಹೈದರಾಬಾದ್
- ಸಾಗರ್
- ಮುರ್ವರ (ಕಟ್ನಿ)
- ನವ್ಸಾರಿ
- ವಪಿ
- ಗ್ವಾಲಿಯರ್
- ಓರಂಗಲ್
- ಮುಂಬೈ
- ಸೂರ್ಯಪೇಟ್