ಕೊಲ್ಕೋತಾ: ನನ್ನ ಗುರುತನ್ನು ಪ್ರಶ್ನಿಸಿ, ನನ್ನ ಪೋಷಕರನ್ನು ಅವಮಾನಪಡಿಸಲು ಎಷ್ಟು ಧೈರ್ಯ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸಿಎಂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೆಣ್ಣು ಅಲ್ಲ, ಗಂಡು ಅಲ್ಲ, ನಪುಂಸಕ(ಹಿಜ್ರಾ) ಎಂದು ಜರಿದಿದ್ದರು. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ, ಮಹಿಳೆಯೊಬ್ಬರನ್ನು ಅವಮಾನಿಸಿ ಕೀಳುಮಟ್ಟದ ರಾಜಕೀಯ ಮಾಡಲು ಅವರಿಗೆ ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ.
ಸೆಂಟ್ರಲ್ ಬಂಗಾಳದ ಮಾಲ್ಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಸರ್ವೋಚ್ಛ ನಾಯಕಿ, ಹಿಜ್ರಾ ಹೇಳಿಕೆಯಿಂದ ನನಗೆ ನಾಚಿಕೆಯಾಗುತ್ತಿದೆ, ಮಹಿಳೆಯೊಬ್ಬರನ್ನು ಅವಮಾನಿಸಲು ಅವರಿಗೆ ಯಾರು ಅಧಿಕಾರ ನೀಡಿಲ್ಲ ಎಂದು ಹೇಳಿದ್ದಾರೆ. ಇದೇ ರೀತಿಯ ಹೇಳಿಕೆಯನ್ನು ಬೇರೆ ರಾಜ್ಯದಲ್ಲಿ ನೀಡಿದ್ದರೇ ಅದಕ್ಕೆ ತಕ್ಕ ಉತ್ತರ ನೀಡುತ್ತಿದ್ದರು ಎಂದು ಅರು ಹೇಳಿದ್ದಾರೆ.
ಮೇ 1 ರಂದು ಮೇದಿನಿಪುರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ಮುಖಂಡ ಶ್ಯಾಮಪ್ರಸಾದ ಮೊಂಡಲ್ ಮಮತಾ ಬ್ಯಾನರ್ಜಿ ಅವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಈ ಸಂಬಂಧ ಎಫ್ ಐ ಆರ್ ದಾಖಲಾಗಿತ್ತು.