ನವಾಜ್ ಷರೀಫ್ 
ದೇಶ

ಸೇನೆ ವಿರೋಧಿ ಭಾಷಣ: ಪ್ರಧಾನಿ ನವಾಜ್ ಷರೀಫ್ ವಿರುದ್ಧ ದೂರು ದಾಖಲಿಸಿದ ಪೊಲೀಸರು

ದೇಶದ ಜನತೆಯನ್ನು ಪ್ರಚೋದಿಸಿ ಸೇನೆ ವಿರುದ್ಧ ದ್ವೇಷ ಮೂಡುವಂತೆ ಭಾಷಣ ಮಾಡಿರುವ ಆರೋಪದಡಿಯಲ್ಲಿ ಪಾಕಿಸ್ತಾನ ಪೊಲೀಸರು ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ವರದಿ ದಾಖಲಿಸಿದ್ದಾರೆ.

ಇಸ್ಲಾಮಾಬಾದ್: ದೇಶದ ಜನತೆಯನ್ನು ಪ್ರಚೋದಿಸಿ ಸೇನೆ ವಿರುದ್ಧ ದ್ವೇಷ ಮೂಡುವಂತೆ ಭಾಷಣ ಮಾಡಿರುವ ಆರೋಪದಡಿಯಲ್ಲಿ ಪಾಕಿಸ್ತಾನ ಪೊಲೀಸರು ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ವರದಿ ದಾಖಲಿಸಿದ್ದಾರೆ. 
ರಾವಲ್ಪಿಂಡಿಯ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ವರದಿ ದಾಖಲಾಗಿದ್ದು, ಅಡ್ವೊಕೇಟ್ ಹಾಗೂ ಐಎಂ ಪಾಕಿಸ್ತಾನ ಪಕ್ಷದ ಅಧ್ಯಕ್ಷ ಇಷ್ತಿಕಾ ಅಹ್ಮದ್ ಮಿರ್ಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
ಒಂದು ಪುಟದಷ್ಟು ದೂರು ನೀಡಲಾಗಿದ್ದು, ನವಾಜ್ ಷರೀಫ್ ಸೇನೆಯ ವಿರುದ್ಧ ಮಾತನಾಡಿರುವುದಕ್ಕೆ ವಾಟ್ಸ್ ಆಪ್ ವಿಡಿಯೋ ಸಾಕ್ಷಿ ಇದೆ ಎಂದು ಇಷ್ತಿಕಾ ಅಹ್ಮದ್ ಹೇಳಿದ್ದಾರೆ. ನವಾಜ್ ಷರೀಫ್ ತಮ್ಮ ಭಾಷಣದಲ್ಲಿ ಸೇನೆ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

56th GST Council: ಇನ್ನು ಶೇ.5 ಮತ್ತು ಶೇ.18 ಎರಡು ಹಂತದ ತೆರಿಗೆ, ಸೆ.22ರ ನವರಾತ್ರಿ ದಿನ ಜಾರಿ

GST 2.0: ಯಾವುದಕ್ಕೆ ತೆರಿಗೆ, ಯಾವುದಕ್ಕೆ ವಿನಾಯಿತಿ ಇಲ್ಲಿದೆ ಮಾಹಿತಿ...

ಮುಖ್ಯಮಂತ್ರಿ ಹುದ್ದೆಯಿಂದ ಫಡ್ನವೀಸ್ ಗೆ ಕೊಕ್: ರಾಷ್ಟ್ರ ರಾಜಕಾರಣಕ್ಕೆ 'ಮಹಾ'ಸಿಎಂ; ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್ ನಲ್ಲಿ ರೂಪಾಲಾ !

ದೇಶವಾಸಿಗಳಿಗೆ ಗುಡ್ ನ್ಯೂಸ್: GST ಸ್ಲ್ಯಾಬ್‌ಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಎರಡೇ ತೆರಿಗೆ

ನೀವೊಬ್ಬರು ಸಚಿವರು...ಹೀಗೆ ಕೇಳಿದ್ರೆ ಹೇಗೆ; ಸಚಿವ ತಿಮ್ಮಾಪುರ ವಿರುದ್ಧ ಡಿಕೆ.ಶಿವಕುಮಾರ್ ಗರಂ

SCROLL FOR NEXT